ಸಾಹಿತಿ ಹಾಡ್ಲಹಳ್ಳಿ ನಾಗರಾಜ್ಗೆ ಅಭಿನಂದನೆ ಸೃಜನಶೀಲ ಸಾಹಿತಿಯನ್ನು ನಿರ್ಲಕ್ಷಿಸದಿರಿ: ಜಾಣಗೆರೆ
ಬೆಂಗಳೂರು: ಐದು ದಶಕಗಳಿಂದಲೂ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಹಾಡ್ಲಹಳ್ಳಿ ನಾಗರಾಜ್ ಅವರ ಪ್ರತಿಭಟನೆಗ ಕನ್ನಡ ಸಾಹಿತ್ಯ ಪರಿಷತ್, ಅಕಾಡೆಮಿಗಳು ಹಾಗೂ ಸರ್ಕಾರ ಮನ್ನಣೆ ನೀಡಿ ಗುರುತಿಸದಿರುವುದು ನೋವಿನ ಸಂಗತಿ ಎಂದು ಹಿರಿಯ ಸಾಹಿತಿ, ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ವಿಷಾದಿಸಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಹಾಡ್ಲಹಳ್ಳಿ ನಾಗರಾಜ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸೃಜನಶೀಲ ಸಾಹಿತಿಯನ್ನು ನಿರ್ಲಕ್ಷಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.ಹಣ, ಜಾತಿ,...