ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ‘ಬಿಸಿಯು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್' ಮತ್ತು 'ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಂದು ದಿನದ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಲಿಂಗರಾಜ ಗಾಂಧಿ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಇನ್ಫೋಸಿಸ್ ಸಹ ಉಪಾಧ್ಯಕ್ಷರಾದ ವಿಕ್ಟರ್ ಸುಂದರರಾಜ್ ಮತ್ತು ಸ್ಮಾರ್ಟೆಡ್ ಇನ್ನೋವೇಷನ್ಸ್ ಸಂಸ್ಥಾಪಕ ಹಾಗೂ ಸಿಇಓ ಸಾಯಿ ಶ್ರೀಕರ್ ಪ್ರಧಾನ ಉಪನ್ಯಾಸ ನೀಡುವರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ಟಿ.ಜವರೇಗೌಡ. ಕುಲಸಚಿವ (ಮೌಲ್ಯಮಾಪನ) ಪೆÇ್ರ.ರಮೇಶ್ ಬಿ., ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಐಐಬಿಎಸ್ ಅಧ್ಯಕ್ಷರಾದ ಡಾ. ಜೈಪ್ರಕಾಶ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ಬಿಸಿಯುಎಸ್ ಎಂಎಸ್ ಮುಖ್ಯಸ್ಥರಾದ ಡಾ. ನಿರ್ಮಲಾ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಹಣಕಾಸು, ಮಾರ್ಕೆಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಮಾನವ ಸಂಪನ್ಮೂಲ ಹಾಗೂ ಉದ್ಯಮಶೀಲತೆ ವಿಷಯಗಳ ಕುರಿತು ಅನೇಕ ಪರಿಣಿತರು ಸಂವಾದ ನಡೆಸುವರು. ಡಾ.ರಿತ್ತಿಕಾ ಸಿನ್ಹಾ ಮತ್ತು ಡಾ. ಟಿ.ಜಗ್ಗಯ್ಯ ವಿಚಾರಗೋಷ್ಠಿಯ ನಿರ್ವಹಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Publisher: eSamudaay