ಹುಬ್ಬಳ್ಳಿಯಲ್ಲಿ ಮಾರ್ಚ್ 23 ರಂದು ಪತ್ರಿಕಾ ಛಾಯಾಗ್ರಹಣ ಕುರಿತು “ಪೋಕಸ್ ಆನ್ ನ್ಯೂಸ್” ಕಾರ್ಯಾಗಾರ ಮೊದಲ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣೆ

22 Mar, 2025



ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾರ್ಚ್ 23 ರಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಪತ್ರಿಕಾ ಛಾಯಾಗ್ರಹಣ ಕುರಿತು “ಫೆÇೀಕಸ್ ಆನ್ ನ್ಯೂಸ್” ಕಾರ್ಯಾಗಾರವನ್ನು ಆಯೋಜಿಸಿದೆ.

ಇದರೊಂದಿಗೆ ಅಕಾಡೆಮಿಯು ಆಯೋಜಿಸಿದ್ದ ಮೊದಲ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಛಾಯಾಚಿತ್ರ ಪ್ರದರ್ಶನವು ಮಾರ್ಚ್ 23 ಹಾಗೂ 24 ರಂದು ನಡೆಯಲಿದೆ.

ಈ ಕಾರ್ಯಾಗಾರವನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಲಾಡ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಕಾಡೆಮಿಯ ಪತ್ರಿಕಾ ಛಾಯಾಗ್ರಹಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪತ್ರಿಕಾ ಛಾಯಾಗ್ರಾಹಕಿ ಶ್ರೀಮತಿ ಶಿಪ್ರಾ ದಾಸ್ ಪ್ರಧಾನ ಭಾಷಣ ಮಾಡುವರು.

ಈ ಸಂದರ್ಭದಲ್ಲಿ "ಪತ್ರಿಕಾ ಛಾಯಾಗ್ರಹಣದ ಪ್ರಸಕ್ತ ಸ್ವರೂಪ ಮತ್ತು ಸವಾಲುಗಳ" ಕುರಿತು ಗೋಷ್ಠಿ ನಡೆಯಲಿದ್ದು, ಪತ್ರಿಕಾ ಛಾಯಾಗ್ರಾಹಕರಾದ ಶ್ರೀಮತಿ ಶಿಪ್ರಾ ದಾಸ್, ಭಾನು ಪ್ರಕಾಶ್ ಚಂದ್ರ, ವಿಶ್ವನಾಥ ಸುವರ್ಣ ಹಾಗೂ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಸಿದ್ದಣ್ಣವರ, ಬಂಡು ಕುಲಕರ್ಣಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿ ಅವರು ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೊಟ್ಟಮೊದಲ ಬಾರಿಗೆ ಪತ್ರಿಕಾ ಛಾಯಾಗ್ರಾಹಕರಿಗಾಗಿ ಸುದ್ದಿ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ರಾಜ್ಯಾದ್ಯಂತ 60 ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು. ಅವರ ಛಾಯಾಚಿತ್ರಗಳನ್ನು ಕಾರ್ಯಕ್ರಮದ ದಿನ ಪ್ರದರ್ಶಿಸಲಾಗುತ್ತಿದೆ.

Publisher: eSamudaay

Powered by