ಭಾರತೀಯ ಚುನಾವಣಾ ಆಯೋಗ - ಚುನಾವಣಾ ಪ್ರಕ್ರಿಯೆಗಳನ್ನು ಬಲಪಡಿಸಲು ದಿಟ್ಟ ಹೆಜ್ಜೆ

21 Mar, 2025


ಚುನಾವಣಾಧಿಕಾರಿಗಳ ನಿರಂತರ ಸಾಮಥ್ರ್ಯ ವರ್ಧನೆಗೆ ಡಿಜಿಟಲ್ ತರಬೇತಿ
ಆಕ್ಷೇಪಣೆಗಳು ಮತ್ತು ಮೇಲ್ಮನವಿಗಳ ಕಾನೂನು ಚೌಕಟ್ಟು ನಮೂದುಗಳ ತಿದ್ದುಪಡಿ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಕ್ರಮ

ಬೆಂಗಳೂರು : ಭಾರತದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ  ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರ ಜೊತೆಯಲ್ಲಿ ಒಂದು ತಿಂಗಳೊಳಗೆ ತಳಮಟ್ಟದಿಂದ ಬಿಎಲ್‍ಒ ಮಟ್ಟದವರೆಗೆ ಸಂಪೂರ್ಣ ಚುನಾವಣಾ ಚಟುವಟಿಕೆಗಳನ್ನು ಬಲಪಡಿಸಲು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ಸುಮಾರು 1 ಕೋಟಿ ಚುನಾವಣಾಧಿಕಾರಿಗಳ ಸಾಮಥ್ರ್ಯ ಬಲಪಡಿಸಲು ಡಿಜಿಟಲ್ ತರಬೇತಿ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ತಳಮಟ್ಟದಿಂದ ರಾಜಕೀಯ ಪಕ್ಷಗಳನ್ನು  ಪ್ರಮುಖ ಪಾಲುದಾರರಾಗಿ ತೆಗದುಕೊಳ್ಳಲಾಗಿದೆ.

ಸುಮಾರು 100 ಕೋಟಿ ಮತದಾರರು ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಆಯೋಗವು ಪುನರುಚ್ಚರಿಸುತ್ತದೆ. ಎಪಿಕ್ ಸಂಖ್ಯೆಯನ್ನು ಆಧಾರ್‍ನೊಂದಿಗೆ ಜೋಡಣೆ ಮಾಡಲು ತಜ್ಞರ ಸಲಹೆಗಳನ್ನು ಪಡೆದು ಈಗಾಗಲೇ ಈ ಬಗ್ಗೆ ಲಿಂಕ್ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIಆಂI) ಮತ್ತು ಭಾರತೀಯ ಚುನಾವಣಾ ಆಯೋಗದ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ಒಬ್ಬ ಮತದಾರರು ನಿಯೋಜಿತ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬಹುದು ಮತ್ತು ಬೇರೆಲ್ಲಿಯೂ ಚಲಾಯಿಸುವಂತಿಲ್ಲ. ದೇಶಾದ್ಯಂತ ಎಪಿಕ್ ಸಂಖ್ಯೆಗಳಲ್ಲಿ ನಕಲುಗಳನ್ನು ತೆಗೆದುಹಾಕಲು ಅಗತ್ಯ ಕ್ರಮ ವಹಿಸಿದ್ದು, ದಶಕಗಳ ಕಾಲದಿಂದ ಇರುವ  ಸಮಸ್ಯೆಯನ್ನು 3 ತಿಂಗಳೊಳಗಾಗಿ ಕೊನೆಗೊಳಿಸಲು ಆಯೋಗವು ನಿರ್ಧರಿಸಿದೆ.

ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಮತದಾರರ ಪಟ್ಟಿಯ ನಿಯಮಿತ ನವೀಕರಣವನ್ನು ಬಲಪಡಿಸಲಾಗುವುದು. ಆಯೋಗವು ರಾಜಕೀಯ ಪಕ್ಷಗಳೊಂದಿಗಿನ ಸಂವಾದದಲ್ಲಿ ತೊಡಗಿದ್ದು, ಕರಡು ಮತದಾರರ ಪಟ್ಟಿಗೆ ಯಾವುದೇ ಸೇರ್ಪಡೆ ಅಥವಾ ಅಳಿಸುವಿಕೆಯು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಂಬಂಧಿಸಿದ ಕಾನೂನು ನಿಬಂಧನೆಗಳ ಅಡಿಯಲ್ಲಿ ಮೇಲ್ಮನವಿಗಳ ಪ್ರಕ್ರಿಯೆಯಿಂದ ನಿಯಂತ್ರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

1950 ರ ಜನಪ್ರತಿನಿಧಿ ಕಾಯ್ದೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಲಭ್ಯವಿದೆ. 2025 ರ ಜನವರಿ 6 ರಿಂದ 10 ರವರೆಗೆ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‍ಎಸ್‍ಆರ್) ಪೂರ್ಣಗೊಳಿಸಿದ ನಂತರ ಕೇವಲ 89 ಮೊದಲ ಮೇಲ್ಮನವಿಗಳು ಮತ್ತು ಏಕೈಕ ಎರಡನೇ ಮೇಲ್ಮನವಿಯನ್ನು ಮಾರ್ಚ್ 7, 2025 ರಂದು ಸಲ್ಲಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಎಲ್ಲಾ ಅರ್ಹ ನಾಗರಿಕರ 100% ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು, ಮತದಾನದ ಸುಲಭತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಉತ್ತಮ ಮತದಾನದ ಅನುಭವವನ್ನು ನೀಡುವುದು ಭಾರತೀಯ ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಯಾವುದೇ ಮತಗಟ್ಟೆಯಲ್ಲಿ 1,200 ಕ್ಕಿಂತ ಹೆಚ್ಚು ಮತದಾರರು ಇರದಂತೆ ಮತ್ತು ಅವರು ಮತದಾರರ 2 ಕಿಲೋಮೀಟರ್ ವ್ಯಾಪ್ತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ದೂರದ ಗ್ರಾಮೀಣ ಮತಗಟ್ಟೆಯಲ್ಲೂ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ನಗರ ಮತದಾರರಲ್ಲಿ ನಿರಾಸಕ್ತಿ ಹೋಗಲಾಡಿಸಲು ಮತ್ತು ಪೆÇ್ರೀತ್ಸಾಹಿಸಲು ಹೆಚ್ಚಿನ ಭಾಗವಹಿಸುವಿಕೆ ಸಂಬಂಧಿಸಿದಂತೆ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುವುದು.

ಸುಮಾರು 1 ಕೋಟಿ ಚುನಾವಣಾ ಸಿಬ್ಬಂದಿಯ ಸಮಗ್ರ ಮತ್ತು ನಿರಂತರ ಸಾಮಥ್ರ್ಯ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿ, ಮಾರ್ಚ್ 4 ಮತ್ತು 5 ರಂದು ನವದೆಹಲಿಯ ಭಾರತೀಯ ಪ್ರಜಾಪ್ರಭುತ್ವ ನಿರ್ವಹಣಾ ಸಂಸ್ಥೆ (IIIDEM  ) ನಲ್ಲಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳ ಎರಡು ದಿನಗಳ ಸಮ್ಮೇಳನವನ್ನು ನಡೆಸಲಾಯಿತು. ಇದರಲ್ಲಿ ಮೊದಲನೆಯದಾಗಿ, ಪ್ರತಿಯೊಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ನೋಂದಣಾಧಿಕಾರಿಗಳು ಭಾಗವಹಿಸಿದ್ದರು. ಸಂವಿಧಾನ, ಚುನಾವಣಾ ಕಾನೂನುಗಳು ಮತ್ತು ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಅವರ ಜವಾಬ್ದಾರಿಗಳೊಂದಿಗೆ 28 ಮಧ್ಯಸ್ಥಗಾರರ ಸ್ಪಷ್ಟ ಮ್ಯಾಪಿಂಗ್‍ನೊಂದಿಗೆ ಇಡೀ ಚುನಾವಣಾ ಚಟುವಟಿಕೆಗಳನ್ನು ಶಕ್ತಿಯುತಗೊಳಿಸಲು ಸಮ್ಮೇಳನವು ಒತ್ತು ನೀಡಿದೆ.
ಚುನಾವಣಾ ಕೈಪಿಡಿಗಳು ಮತ್ತು ಸೂಚನೆಗಳಿಗಾಗಿ ಕೈಪಿಡಿಗಳನ್ನು ಇತ್ತೀಚಿನ ಬದಲಾವಣೆಗಳೊಂದಿಗೆ ಸಮನ್ವಯಗೊಳಿಸಲಾಗುತ್ತದೆ. ಬಹು ಭಾರತೀಯ ಭಾμÉಗಳಲ್ಲಿ ಡಿಜಿಟಲ್ ತರಬೇತಿ ಕಿಟ್‍ಗಳನ್ನು ಸುಲಭವಾಗಿ ಪಡೆದುಕೊಳ್ಳಲು ಮತ್ತು ಮುಂಚೂಣಿಯ ಕಾರ್ಯಕರ್ತರ ಪರಿಣಾಮಕಾರಿ ತರಬೇತಿಗಾಗಿ ಸಿದ್ಧಪಡಿಸಲಾಗುತ್ತದೆ. ಅನಿಮೇಟೆಡ್ ವೀಡಿಯೊಗಳು ಮತ್ತು ಇಂಟಿಗ್ರೇಟೆಡ್ ಡ್ಯಾಶ್‍ಬೋರ್ಡ್ ತರಬೇತಿಗೆ ಡಿಜಿಟಲ್ ಪುಶ್ ಅನ್ನು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ತರಬೇತಿ ಘಟಕವನ್ನು ಸಹ ರೂಪಿಸಲಾಗುತ್ತಿದೆ.

ಚುನಾವಣಾ ಪ್ರಕ್ರಿಯೆಗಳ ಎಲ್ಲಾ ಅಂಶಗಳಲ್ಲಿ ರಾಜಕೀಯ ಪಕ್ಷಗಳ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ಮಾರ್ಚ್ 4 ರಂದು ಜರುಗಿದ ಮುಖ್ಯ ಚುನಾವಣಾಧಿಕಾರಿಗಳ  ಸಮ್ಮೇಳನದಲ್ಲಿ ಎಲ್ಲಾ 36 ಮುಖ್ಯ ಚುನಾವಣಾಧಿಕಾರಿಗಳು, 788 ಜಿಲ್ಲಾ ಚುನಾವಣಾಧಿಕಾರಿಗಳು, 4123 ಚುನಾವಣಾ ನೋಂದಣಾಧಿಕಾರಿಗಳು  ನಿಯಮಿತವಾಗಿ ಸರ್ವಪಕ್ಷ ಸಭೆಗಳು ಮತ್ತು ಸಂವಾದಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ದೇಶದಾದ್ಯಂತ ನಡೆಯುವ ಇಂತಹ ಸಭೆಗಳು ತಳಮಟ್ಟದಲ್ಲಿಯೇ ರಾಜಕೀಯ ಪಕ್ಷಗಳು ಎತ್ತಿರುವ ಯಾವುದೇ ಮಹೋನ್ನತ ಮತ್ತು ಉದಯೋನ್ಮುಖ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಮಾರ್ಚ್ 31, 2025 ರೊಳಗೆ ಭಾರತದಾದ್ಯಂತ ಪೂರ್ಣಗೊಳ್ಳಲಿದೆ. ಮತದಾರರ ಪಟ್ಟಿಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳು ಸೇರಿದಂತೆ ಚುನಾವಣಾ ಕಾನೂನುಗಳ ಪ್ರಕಾರ ಕಾರಣ ಪ್ರಕ್ರಿಯೆಗಳ ಕುರಿತು ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ಅವರ ನೇಮಕಗೊಂಡ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವ ಆಯೋಗದ ಪ್ರಸ್ತಾಪವನ್ನು ರಾಜಕೀಯ ಪಕ್ಷಗಳು ಸ್ವಾಗತಿಸಿವೆ.

ಭಾರತೀಯ ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಂದ ಚುನಾವಣೆಯ ನಡವಳಿಕೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಲಹೆಗಳನ್ನು ಆಹ್ವಾನಿಸಿದೆ. ಸಲಹೆಗಳನ್ನು 30 ಏಪ್ರಿಲ್, 2025 ರೊಳಗೆ ಕಳುಹಿಸಬಹುದು. ರಾಜಕೀಯ ಪಕ್ಷಗಳ ಪರಸ್ಪರ ಚರ್ಚೆಗೆ ಸಂಬಂಧಿಸಿದಂತೆ ಅವರಿಗೆ ಅನುಕೂಲವಾದ ಸಮಯದಲ್ಲಿ ದೆಹಲಿಯಲ್ಲಿ ಆಯೋಗವನ್ನು ಭೇಟಿ ಮಾಡಲು ಆಹ್ವಾನವನ್ನು ಸಹ ನೀಡಲಾಗಿದೆ.

Publisher: eSamudaay

Powered by