ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಪರ ಗೂಢಚಾರಿಕೆಯಲ್ಲಿ ತೊಡಗಿದ್ದ ಬೋಧ್ ರಾಜ್ ಎಂಬವನನ್ನು ಭಾರತದ ಸೇನಾ ಅಧಿಕಾರಿಗಳು ಬಂಧಿಸಿದ್ದಾರೆ. ಸಾಂಬಾ ಸೆಕ್ಟರ್ ನಲ್ಲಿ ಶುಕ್ರವಾರ ತಡರಾತ್ರಿ ಬೋಧ್ ರಾಜ್ ನನ್ನು ಬಂಧಿಸಿರುವ ಭಾರತದ ಸೇನಾ ಅಧಿಕಾರಿಗಳು ಈತನ ಬಳಿ ಇದ್ದ ಪಾಕಿಸ್ತಾನದ 2 ಸಿಮ್ ಕಾರ್ಡ್ ಗಳು ಮತ್ತು ಭಾರತೀಯ ಸೇನಾ ಪೋಸ್ಟ್ ಗಳ ಮ್ಯಾಪ್ ನ್ನು ವಶಪಡಿಸಿಕೊಂಡಿದ್ದಾರೆ.
ಬೋಧ್ ರಾಜ್ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಪ್ರದೇಶದ ನಿವಾಸಿಯೆಂದು ತಿಳಿದುಬಂದಿದೆ. ಬಂಧಿತ ಬೋಧ್ ರಾಜ್ ನನ್ನು ರಹಸ್ಯ ಸ್ಥಳದಲ್ಲಿ ಸೇನಾ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ ರಾಜಸ್ಥಾನದಲ್ಲಿ ಗೂಢಚಾರಿಕೆಯ ಆರೋಪದಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ಬಳಿ ಭಾರತೀಯ ಸೇನಾ ಗಡಿಗಳ ಫೋಟೋಗಳು ಹಾಗೂ ಮ್ಯಾಪ್ ಗಳ ಪತ್ತೆಯಾಗಿದ್ದವು.
ಪಾಕ್ ಯೋಧರು ಸಾವಿಗೀಡಾಗಿಲ್ಲ: ಪಾಕ್ ಸ್ಪಷ್ಟನೆ
ಶುಕ್ರವಾರ ಹಿರಾನಗರ ಸೆಕ್ಟರ್ ನಲ್ಲಿ ಭಾರತದ ಯೋಧರು ನಡೆಸಿದ .ದಾಳಿಯಲ್ಲಿ 7 ಮಂದಿ ಪಾಕಿಸ್ತಾನ ಯೋಧರು ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಪಾಕಿಸ್ತಾನ ಸೇನೆ ತಳ್ಳಿಹಾಕಿದೆ.
Publisher: eSamudaay