9 ತಿಂಗಳ ಬಾಹ್ಯಾಕಾಶ ಯಾನ ಅಂತ್ಯ: ಹತ್ತಾರು ನಿರೀಕ್ಷೆಯೊಂದಿಗೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಸುರಕ್ಷಿತ ವಾಪಸ್‌ 

19 Mar, 2025

 

                ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕಳೆದ ಒಂಬತ್ತು ತಿಂಗಳಿಂದ ಸಿಲುಕಿಕೊಂಡಿದ್ದ ನಾಸಾ ಗಗನಯಾತ್ರಿಗಳಾದ ʻಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ʼ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ  ಇಂದು ಭೂಮಿಗೆ ಕೊನೆಗೂ  ಕರೆತಂದಿದೆ. 2024ರ ಜೂನ್ 5 ರಂದು 8 ದಿನಗಳ ಕಾರ್ಯಾಚರಣೆಗೆಂದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅವರು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಅವರ ಬಾಹ್ಯಾಕಾಶ ಯಾನ 9 ತಿಂಗಳವರೆಗೆ ವಿಸ್ತರಿಸಲ್ಪಟ್ಟಿತು. 


      ಈ ಅವಧಿಯಲ್ಲಿ, ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡ ಸುಮಾರು 900 ಗಂಟೆಗಳ ಸಂಶೋಧನೆ ನಡೆಸಿ, 150ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರಿಂದ ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ಅವರು 9 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ, ಒಟ್ಟು 62 ಗಂಟೆ 9 ನಿಮಿಷಗಳನ್ನು ಬಾಹ್ಯಾಕಾಶ ನಿಲ್ದಾಣದ ಹೊರಗೆ ಕಳೆದಿದ್ದಾರೆ. ಅವರನ್ನು ಭೂಮಿಗೆ ಕರೆತರಲು, ಸ್ಪೇಸ್‌ಎಕ್ಸ್ ತನ್ನ ಫಾಲ್ಕನ್ 9 ರಾಕೆಟ್ ಮೂಲಕ ಕ್ರೂ-10 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈ ಮಿಷನ್‌ನಲ್ಲಿ ನಾಲ್ವರು ಹೊಸ ಗಗನಯಾತ್ರಿಗಳು ಭಾಗಿಯಾಗಿದ್ದು, ಅವರು ISS ಗೆ ಆಗಮಿಸಿ, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬದಲಿ ವಾಪಸ್‌ ಬೂಮಿಗೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ.
 ಸುನೀತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಅವರು ಸುರಕ್ಷಿತ ಭೂಮಿಗೆ ಮರಳಲಿದ್ದರಿಂದ ಜಗತ್ತಿನಾದ್ಯಂತ ಜನರು ಸಂತಸ ವ್ಯಕ್ತಪಡಿಸಿದ್ದಾರೆ.  ಸುನಿತಾ ವಿಲಿಯಮ್ಸ್‌ ಕುರಿತು  ಭಾರತಿಯರು ಹೆಮ್ಮೆಯಿಂದ ಗರ್ವವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಗುಜರಾತ್‌ನ ಜುಲಾಸನ್ ಗ್ರಾಮದಲ್ಲಿ, ಅವರ ಸುರಕ್ಷಿತ ಮರಳುವಿಕೆಗೆ ವಿಶೇಷ ಪ್ರಾರ್ಥನೆಗಳನ್ನು ನಡೆಸಿರುವುದ ಇಲ್ಲಿ ಗಮನಿಸಬೇಕಾಗಿದೆ. 

 

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

          ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುನಿತಾ ವಿಲಿಯಮ್ಸ್ ಅವರ ಈ ಸಾಧನೆಗೆ ಅಭಿನಂದನೆ ಸಲ್ಲಿಸಿ. ಟ್ವಿಟ್‌ ಮಾಡಿದ್ದಾರೆ.  ʻʻಸುನಿತಾ ವಿಲಿಯಮ್ಸ್‌ ಅವರೆ  ನಿಮ್ಮನ್ನು ಭೂಮಿಯು ಇಷ್ಟು ದಿನ ಮಿಸ್ ಮಾಡಿಕೊಂಡಿತ್ತು. ನಿಮ್ಮ ಧೈರ್ಯ ಮತ್ತು ಮಾನವೀಯ ಆತ್ಮ ಸ್ಥೈರ್ಯವು ಅನೇಕರನ್ನು ಪ್ರೇರೇಪಿಸುತ್ತದೆ" ಎಂದು ಬಣ್ಣಿಸಿದ್ದಾರೆ.

ಇಸ್ರೋ ಅಭಿನಂದನೆ: 
           ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯೂ ಕೂಡ ಸುನಿತಾ ವಿಲಿಯಮ್ಸ್ ಅವರನ್ನು ಸ್ವಾಗತಿಸಿದೆ. ಅವರ ಬಾಹ್ಯಾಕಾಶ ಅನುಭವವನ್ನು ಭಾರತದ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಬಳಸಿಕೊಳ್ಳಲು ನಾವು ಆಸಕ್ತರಾಗಿದ್ದೇವೆ ಎನ್ನುವ ಸಂಗತಿಯನ್ನು.  ಜೊತೆಗೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಅವರ ಅನುಭವವನ್ನು ನಮ್ಮ ಮುಂದಿನ ಮಿಷನ್‌ಗಳಲ್ಲಿ ಬಳಸಲು ನಾವು ಎದುರು ನೋಡುತ್ತಿದ್ದೇವೆ  ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ವ್ಯಕ್ತಪಡಿಸಿದ್ದಾರೆ. 

9 ತಿಂಗಳ ಬಾಹ್ಯಾಕಾಶ ಯಾನದ ಟೈಮ್‌ಲೈನ್:

  •  ಜೂನ್ 5, 2024:  ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಆರಂಭಿಸಿದರು. ಈ ಮಿಷನ್ ಕೇವಲ 8 ದಿನಗಳ ಕಾಲ ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷದ ಕಾರಣ ಈ ಅವಧಿ ನಿರೀಕ್ಷೆಗೂ ಮೀರಿ 9 ತಿಂಗಳವರೆಗೆ ವಿಸ್ತರಿತು.  
  • ಜೂನ್ 6, 2024: ISS ತಲುಪಿದ ಬಳಿಕ, ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಸಾಫ್ಟ್‌ವೇರ್ ಸಮಸ್ಯೆ ಮತ್ತು ಇಂಧನ ಲೀಕ್ ಸಮಸ್ಯೆ ಕಂಡು ಬಂದ್ದಿತ್ತು. ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವ ಸಲುವಾಗಿ ನೌಕೆಯ ಮರುನಿಯಂತ್ರಣ ಪ್ರಕ್ರಿಯೆ ಪ್ರಾರಂಭವಾಯಿತು.
  •  ಆಗಸ್ಟ್ 2024 - ಫೆಬ್ರವರಿ 2025: ಈ ಅವಧಿಯಲ್ಲಿ, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ISS ನಲ್ಲಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು. ಸೌರಮಂಡಲದ ಹೊರಗಿನ ಶಕ್ತಿಪೂರಿತ ಕಣಗಳು ಮಾನವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮಹತ್ವದ ಅಧ್ಯಯನ ಮಾಡಲಾಯಿತು. ಜೊತೆಗೆ, ಗ್ರಾವಿಟಿಯಿಲ್ಲದ ಪರಿಸ್ಥಿತಿಯ ಪ್ರಭಾವವನ್ನು ಮನುಷ್ಯನ ದೇಹದ ಮೇಲೆ ಪರೀಕ್ಷಿಸಲಾಯಿತು.
  •  ಮಾರ್ಚ್ 3, 2025: ನಾಸಾ ಮತ್ತು ಸ್ಪೇಸ್‌ಎಕ್ಸ್, ಗಗನಯಾತ್ರಿಗಳನ್ನು ಭೂಮಿಗೆ ಸುರಕ್ಷಿತವಾಗಿ ಮರಳಿಸುವ ಯೋಜನೆಗಳನ್ನು ಅಂತಿಮಗೊಳಿಸಿದರು. ಈ ಹಿನ್ನೆಲೆಯಲ್ಲಿ, ಡ್ರ್ಯಾಗನ್ ಕ್ಯಾಪ್ಸೂಲ್‌ನ ತಾಂತ್ರಿಕ ತಪಾಸಣೆ ಮತ್ತು ಮರುಪ್ರಯೋಗ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
  • ಮಾರ್ಚ್ 18, 2025: ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಕ್ರೂ-10 ಮಿಷನ್‌ನೊಂದಿಗೆ ಉಡಾವಣೆಗೊಂಡು ISS ತಲುಪಿತು. ಈ ನೌಕೆಯು ಗಗನಯಾತ್ರಿಗಳನ್ನು ಭೂಮಿಗೆ ಸುರಕ್ಷಿತವಾಗಿ ಮರಳಿಸುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿತು.
  •  ಮಾರ್ಚ್ 19, 2025:  ISS ನಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಡ್ರ್ಯಾಗನ್ ಕ್ಯಾಪ್ಸೂಲ್‌ನ ಮೂಲಕ ಭೂಮಿಗೆ ಮರಳುವ ಪ್ರಯಾಣ ಆರಂಭಿಸಿದರು. ಈ ಪ್ರಯಾಣದಲ್ಲಿ ಸುಮಾರು 19 ಗಂಟೆಗಳ ಕಾಲ ಭೂಮಿಯ ಕಕ್ಷೆಯಲ್ಲಿದ್ದು, ಅಂತಿಮವಾಗಿ ಭೂ ಸ್ಪರ್ಷಮಾಡಿದರು.
  • ಮಾರ್ಚ್ 19, 2025 (ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 3:27AM): ಫ್ಲೋರಿಡಾದ ಅಟ್ಲಾಂಟಿಕ್ ಮಹಾಸಾಗರದಲ್ಲಿ ಡ್ರ್ಯಾಗನ್ ಸ್ಪ್ಲಾಶ್‌ಡೌನ್ ಆಗಿ, ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಗಗನಯಾತ್ರಿಗಳನ್ನು ಸಮುದ್ರದಿಂದ ರಕ್ಷಿಸಿ ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯಲಾಯಿತು.

ಗಗನಯಾನದ ಪ್ರಮುಖ ಅಂಶಗಳು:

  •   ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿದಿದ್ದು, ಇದು ನಿರೀಕ್ಷಿತ ಅವಧಿಕ್ಕಿಂತ 35 ಪಟ್ಟು ಹೆಚ್ಚಾಗಿದೆ.
  • ISS ನಲ್ಲಿ ತಯಾರಿಸಿದ ಹೊಸ ಪ್ರಾಯೋಗಿಕ ಪಾಕಪದ್ಧತಿ (Space Food Experiment) ಈ ಅವಧಿಯಲ್ಲಿ ಪರೀಕ್ಷಿಸಲಾಯಿತು.
  • ನಾಸಾ ಮತ್ತು ಸ್ಪೇಸ್‌ಎಕ್ಸ್ ಅವರ ಸುರಕ್ಷಿತ ಮರಳುವಿಕೆಗೆ ಒತ್ತು ನೀಡಿದವು.
  •  ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ನಡೆಸಿದ ದೈಹಿಕ ವ್ಯಾಯಾಮಗಳು ಮತ್ತು ನ್ಯೂಟ್ರಿಷನ್ ಪ್ಲ್ಯಾನ್ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಯಿತು.
  • ಈ ಅನುಭವವನ್ನು ಭವಿಷ್ಯದ ಚಂದ್ರಯಾನ ಮತ್ತು ಮಂಗಳಯಾನಗಳ ಜತೆ ಸಂಪರ್ಕಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಜಾಗತೀಕ ಮಟ್ಟದ ವಿಜ್ಞಾನಿಗಳ ಮುಂದೆ ಇರುವ ನಿರೀಕ್ಷೆಗಳು:

ನಾಸಾ ಮತ್ತು ಇಸ್ರೋ ನಡುವೆ ಸಹಕಾರ ಹೆಚ್ಚಾಗುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳಯಾನ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಬಾಹ್ಯಾಕಾಶ ಸಂಶೋಧನೆಗೆ ಸುನಿತಾ ವಿಲಿಯಮ್ಸ್ ಅವರ ಈ ಯಶಸ್ವಿ ಮಿಷನ್ ಹೊಸ ದಿಕ್ಕು ನೀಡಲಿದೆ. ಈ ಹಿಂದೆ ಇಸ್ರೋ ಮತ್ತು ನಾಸಾ ಸಹಯೋಗದಲ್ಲಿ ಮಾನವಬಾಹ್ಯಾಕಾಶ ಮಿಷನ್‌ಗಳ ಕುರಿತು ಚರ್ಚೆಗಳು ನಡೆದಿದ್ದು, ಇದೀಗ ಸುನಿತಾ ವಿಲಿಯಮ್ಸ್ ಅವರ ಅನುಭವದಿಂದ ಇವು ಇನ್ನಷ್ಟು ಬಲಗೊಳ್ಳುವ ಸಾಧ್ಯತೆ ಇದೆ.
ಭವಿಷ್ಯದ ಬಾಹ್ಯಾಕಾಶ ಯಾನದಲ್ಲಿ ಹೆಚ್ಚು ಉನ್ನತ ತಂತ್ರಜ್ಞಾನವನ್ನು ಬಳಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಪ್ರಯೋಗಗಳನ್ನು ಮುಂದಿನ ಮಾನವ ಚಂದ್ರಯಾನ (Artemis Mission) ಮತ್ತು ಮಂಗಳಯಾನಗಳಲ್ಲಿ ಬಳಸಲು ತಯಾರಿ ನಡೆಸಲಾಗುವುದು.

ಶ್ರೀನಾಥ್‌ ಜೋಶಿ
9060188081 

 

Publisher: eSamudaay

Powered by