ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ಎರವಲು ಸೇವೆಯಲ್ಲಿ ಕಾರ್ಯ ನಿರ್ವಹಿಸುವವರನ್ನು ವಾಪಸ್ಸು ಪಡೆಯಲಾಗುವುದು - ಸಚಿವ ದಿನೇಶ್ ಗುಂಡೂರಾವ್

17 Mar, 2025

 

ಬೆಂಗಳೂರು : ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ಎರಲು ಸೇವೆಯಲ್ಲಿರುವವರನ್ನು ವಾಪಸ್ಸು ಪಡೆಯಲಾಗುವುದು. ವೈದ್ಯರ ಅಗತ್ಯತೆ ಇಲಾಖೆ ಇದೆ. ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 130 ಅಧಿಕಾರಿ  ನೌಕರರು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಇಲಾಖೆಗೆ ವಾಪಸ್ಸು ಪಡೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಶರವಣ ಟಿ.ಎ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಹಲವಾರು ಬಾರಿ ವಾಪಸ್ಸು ಪಡೆಯಲು ಅದೇಶ ಮಾಡಿದ್ದರೂ ಸಹ ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಾಲಯದಲ್ಲಿ (ಕೆ.ಎ.ಟಿ) ಮೊಕ್ಕದ್ದಮೆ ಹೂಡಿ, ಸ್ಟೇ ತಂದು ಅಲ್ಲೇ ಮುಂದುವರೆಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಅಧಿಕಾರಿ / ನೌಕರರನ್ನು ವಾಪಸ್ಸು ಪಡೆಯಲು ಕ್ರಮ ವಹಿಸಲಾಗುವುದು.

ಕೆಲ ಅಧಿಕಾರಿಗಳು ನಕಲಿ ಅಂಕಪಟ್ಟಿ ಸಲ್ಲಿಸಿರುವ ದೂರಿನನ್ವಯ ಇಲಾಖೆಗೆ ಬಂದಂತಹ ದೂರಿನ ಆಧಾರದ ಮೇರೆಗೆ ಮುಖ್ಯ ಜಾಗೃತಾಧಿಕಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ತನಿಖೆ ನಡೆಸಿ 2016ನೇ ಫೆಬ್ರವರಿ 23 ರಂದು ತನಿಖಾ ವರದಿ ಸಲ್ಲಿಸಿದ್ದು, ಸಿಬ್ಬಂದಿಗಳ ವಿದ್ಯಾರ್ಹತೆ ನೈಜತೆ ಬಗ್ಗೆ ಖಾತರಿಪಡಿಸಿಕೊಳ್ಳಳು ಸೂಚಿಸಿದ್ದು, ಅದರಂತೆ ನಿರ್ದೇಶನಾಲಯವು 2017ನೇ ಮಾರ್ಚ್ 31ರ ಪತ್ರದಲ್ಲಿ ಮೈಸೂರಿನ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಇವರಿಗೆ ಕೋರಲಾಗಿತ್ತು. ಅಂಕಪಟ್ಟಿ ಪರಿಶೀಲಿಸಿದ ವಿಶ್ವವಿದ್ಯಾಲಯ 6 ಕಿರಿಯ ಆರೋಗ್ಯ ಸಹಾಯಕರುಗಳ ದಾಖಲಾತಿಗಳು ನೈಜತೆಯಿಂದ ಕೂಡಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ. ಇದರ ಆಧಾರದ ಮೇಲೆ ಸುಳ್ಳು ಅಂಕಪಟ್ಟಿ ಪತ್ತು ಪ್ರಮಾಣ ಪತ್ರಗಳನ್ನು ನೀಡಿದ್ದ 6 ಕಿರಿಯ ಸಹಾಯಕರುಗಳನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ 2018ನೇ ಜನವರಿ 10 ರಂದು ಅಮಾನತ್ತುಗೊಳಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದರು.

Publisher: eSamudaay

Powered by