ಬೆಂಗಳೂರು : ಷಡಾ/ಬೀಳು ಜಮೀನುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ನಿಯಮಗಳು, 1966 ನಿಯಮ 119(2)ಕ್ಕೆ ತಿದ್ದುಪಡಿ ಮಾಡಿ ಅವಧಿ ವಿಸ್ತರಿಸಿರುವ ಕುರಿತು ದಿನಾಂಕ: 23-02-2023ರಂದು ಆರ್‍ಡಿ 17 ಎಲ್‍ಜಿಪಿ 2023ರ ಮೂಲಕ ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅಂತಿಮ ಅಧಿಸೂಚನೆಯನ್ನು ಹೊರಡಿಸಿದ ನಂತರ ಬೀಳು ರೆಸ್ಟೋರ್ ಮಾಡುವ ಕುರಿತು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ರವಿಕುಮಾರ್ (ಗಣಿಗ) ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದಿನಾಂಕ: 07-12-2012 ರಿಂದ 6-09-2014 ರವರೆಗೆ ಕರ್ನಾಟಕ ಭೂ ಕಂದಾಯ ನಿಯಮಗಳಯ 1966ರ ನಿಯಮ 119ಕ್ಕೆ ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳಿಗೆ ಬೀಳು ರಿಸ್ಟೋರ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಸರ್ಕಾರದ ಅಧಿಸೂಚನೆಯ ಹಿನ್ನೆಲೆಯಲ್ಲಿ 7-12-2022 ರಿಂದ 6-9-2014ರವರೆಗೆ ಬೀಳು ರೆಸ್ಟೋರ್ ಆದೇಶವಾಗಿರುವ ಪ್ರಕರಣಗಳಿಗೆ ಭೂಮಿ ತಂತ್ರಾಂಶದಲ್ಲಿ ಬೀಳು/ಫಡಾ ರೆಸ್ಟೋರ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಹಾಗೆಯೇ ಪುನರ್ ಸ್ಥಾಪನೆಗೆ ಆದೇಶವಾಗಿ ಮ್ಯುಟೇಷನ್ ಪ್ರಕ್ರಿಯೆಗಳಿಗೆ ಬಾಕಿ ಇರುವ ಪ್ರಕರಣಗಳಿಗೆ ಮಾತ್ರ ಭೂಮಿ ತಂತ್ರಾಂಶವನ್ನು ಬಳಸಲು ನಿರ್ದೇಶಿಸÀಲಾಗಿರುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ವಿಲೇ ಮಾಡುವುದಕ್ಕೆ ಕ್ರಮ ವಹಿಸಲಾಗುವುದು. ಹಾಲಿ ಸಾಗುವಳಿ ಮಾಡದೇ ಇರುವವರು ಸಹ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಅರ್ಜಿದಾರರ ಸ್ಥಿತಿಗತಿಗಳನ್ನು ಪರಿಶೀಲಿಸಿ ನೈಜ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದರು.
Publisher: eSamudaay