ಅರಣ್ಯ ಪ್ರದೇಶಗಳಲ್ಲಿ ಹೆÀಚ್ಚಿನ ಮರಗಳನ್ನು ಬೆಳೆಸಲು ಅಗತ್ಯ ಕ್ರಮ - ಸಚಿವ ಈಶ್ವರ ಬಿ ಖಂಡ್ರೆ

10 Mar, 2025

 

ಬೆಂಗಳೂರು  : ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಲು ಸರ್ಕಾರವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಮಾನವ - ಪ್ರಾಣಿಗಳ ಸಂಘರ್ಷ ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಒಟ್ಟು 3471 ಪರವಾನಗಿ ಹೊಂದಿರುವ ಮರದ ಮಿಲ್ಲುಗಳಿರುತ್ತವೆ. ಕಳೆದ 02 ವರ್ಷಗಳಲ್ಲಿ ಮರದ ಮಿಲ್ಲುಗಳು ಅರಣ್ಯ ಇಲಾಖೆಯಿಂದ ಇ-ಹರಾಜಿನಲ್ಲಿ ಒಟ್ಟು 4,81,685 ಘನ ಮೀಟರ್ ನಾಟಾ ಮತ್ತು ಇತರೆ ಅರಣ್ಯ ಉತ್ಪನ್ನಗಳನ್ನು ಖರೀದಿ ಮಾಡಿರುತ್ತದೆ.
ಅರಣ್ಯ ಇಲಾಖೆಯಿಂದ ಮರಗಳನ್ನು ಖರೀದಿ ಮಾಡದೇ ಇದ್ದಲ್ಲಿ, ನೇರವಾಗಿ ರೈತರು ಮತ್ತು ಖಾಸಗಿ ವ್ಯಕ್ತಿಗಳು ಬೆಳೆದ ಮರಗಳನ್ನು ಖರೀದಿ ಮಾಡಲಾಗುತ್ತದೆ. ಮರದ ದಿಮ್ಮಿಗಳನ್ನು ನೇರವಾಗಿ ಇತರೆ ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದಲೂ ಅಮದು ಮಾಡಿಕೊಳ್ಳಲಾಗುತ್ತದೆ.

ಕಳೆದ 02 ವರ್ಷಗಳಲ್ಲಿ ಅರಣ್ಯ ಇಲಾಖೆಯು ಸಾಗುವಾನಿ, ಹುಣಸೆ, ಬೀಟೆ, ರೈನ್ ಟ್ರೀ, ಪಲ್ಸೋಫಾರಂ, ಬೇವು, ಹುಣಸೆ, ಗುಲ್ಮೊಹರ್, ಕಾಡು ಬಾದಾಮಿ, ಸಿಲ್ವರ್, ಓಕ್, ಬಾಗೆ, ಅರಳಿ, ಸುಬಾಬುಲ್, ನೇರಳೆ, ಕಾಡುಜಾತಿ ತಪಸಿ, ಶ್ರೀಗಂಧ, ಹೊಂಗೆ, ಹತ್ತಿ, ಅಶೋಕ, ಮಾವು, ಬಿಲ್ವ, ಬಸವನಪಾದ, ಹಲಸು, ಮತ್ತಿ, ನಂದಿ, ಕರಿಮತ್ತಿ, ಕವಲು, ತಡಸಾಲು ಇತ್ಯಾದಿ ಮರಗಳನ್ನು ಕತ್ತರಿಸಲು ಅನುಮತಿ ನೀಡಿದೆ. ಅದೇ ರೀತಿ ಅರಣ್ಯಗಳಲ್ಲಿ ಹೊಸ ಮರ ಮತ್ತು ಗಿಡಗಳನ್ನು ಬೆಳಸಲು ಸಹ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

Publisher: eSamudaay

Powered by