ಕರ್ನಾಟಕ ರಾಜ್ಯ ಪೊಲೀಸ್ ಟಿ-20 ಕ್ರಿಕೆಟ್ ಟೂರ್ನಮೆಂಟ್-2025 ಚಾಂಪಿಯನ್ಸ್ ಆದ ಬೆಂಗಳೂರು ನಗರ ಪೆÇಲೀಸ್ ತಂಡ

04 Feb, 2025

 

ಬೆಂಗಳೂರು,: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ಟಿ-20 ಕ್ರಿಕೆಟ್ ಟೂರ್ನಮೆಂಟ್-2025ನ್ನು ಜನವರಿ 27 ರಿಂದ 29 ರವರೆಗೆ ಆಯೋಜಿಸಿದ್ದ  ಟೂರ್ನಮೆಂಟ್‍ನಲ್ಲಿ 12 ತಂಡಗಳು ಭಾಗವಹಿಸಿರುತ್ತವೆ, ಉತ್ತರ, ದಕ್ಷಿಣ, ಪೂರ್ವ, ಈಶಾನ್ಯ, ಕೇಂದ್ರೀಯ, ಪಶ್ಚಿಮ ವಲಯ ಕೆಎಸ್‍ಆರ್‍ಪಿ (ಎರಡು ತಂಡಗಳು) ಸಿಐಡಿ, ವಿಶೇಷ ಘಟಕಗಳು ಆಂತರಿಕ ಭದ್ರತಾ ವಿಭಾಗ, ಬೆಂಗಳೂರು ನಗರ ಪೆÇಲೀಸ್ ಮತ್ತು ಬಳ್ಳಾರಿ ವಲಯಗಳು ಭಾಗವಹಿಸಿದ್ದವು.

ತಂಡಗಳನ್ನು ನಾಲ್ಕು ಗುಂಪುಗಳಾಗಿ (ಎ,ಬಿ,ಸಿ,ಡಿ) ಹಂಚಿಕೆ ಮಾಡಲಾಗಿದ್ದು, ಪ್ರತಿ ಗುಂಪಿನ ಮೊದಲನೇ ತಂಡವು ಅರ್ಹತಾ ಪಂದ್ಯಗಳಿಂದ ಅರ್ಹತೆ ಗಳಿಸಿತು. ಮೊದಲನೇ ಸೆಮಿಫೈನಲ್‍ನಲ್ಲಿ ಬೆಂಗಳೂರು ನಗರ ಪೆÇಲೀಸ್ ಈಶಾನ್ಯ ವಲಯವನ್ನು ಪರಾಜಯಗೊಳಿಸಿದರೆ, ದ್ವಿತೀಯ ಸೆಮಿಪೈನಲ್‍ನಲ್ಲಿ ಬಳ್ಳಾರಿ ವಲಯ ಉತ್ತರ ವಲಯವನ್ನು ಪರಾಜಯಗೊಳಿಸಿದರು.

ಜನವರಿ, 29 ರಂದು ಫೈನಲ್ ಪಂದ್ಯ ಆರ್‍ಎಸ್‍ಐ ಮೈದಾನದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಉದ್ಘಾಟನೆ ಮಾಡಿದರು. ಬಳ್ಳಾರಿ ವಲಯ ತಂಡ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ನಗರ ಪೆÇಲೀಸ್ ತಂಡವು 20 ಓವರ್‍ಗಳಲ್ಲಿ 135 ರನ್‍ಗಳ ಗುರಿಯನ್ನು ನೀಡಿ, ಬಳ್ಳಾರಿ ವಲಯ ತಂಡವನ್ನು 19.3 ಓವರ್‍ಗಳಲ್ಲಿ 122/10 ರನ್‍ಗಳಿಗೆ ಅಲ್‍ಔಟ್ ಮಾಡಿ ಜಯವನ್ನು ಸಾಧಿಸಿತು. ಟೂರ್ನಮೆಂಟ್‍ನಲ್ಲಿ 04 ಮ್ಯಾಚ್‍ಗಳಲ್ಲಿ 78 ರನ್ ಗಳಿಸಿ ಮತ್ತು 11 ವಿಕೆಟ್‍ಗಳನ್ನು ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ ಸಿದ್ದರಾಮೇಶ್ವರ ಬಳ್ಳಾರಿ ವಲಯ ರವರು ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಡಾ. ಎಂ.ಎ ಸಲೀಮ್ ಐಪಿಎಸ್, ಪೆÇಲೀಸ್ ಮಹಾ ನಿರ್ದೇಶಕರು, ಸಿಐಡಿ ಬೆಂಗಳೂರು ರವರು ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಬಹುಮಾನಗಳನ್ನು ವಿತರಿಸಿದರು. ರೆಡ್ ಲೆದರ್ ಬಾಲ್ ನಲ್ಲಿ ನಡೆದ ಈ ಟೂರ್ನಮೆಂಟ್ ಅನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‍ನ ನಿರ್ಣಾಯಕರು. ಸ್ಕೋರ್ಸ್, ಫಿಸಿಯೋಥೆರಪಿಸ್ಟ್, ಸೆಲೆಕ್ಟರ್ ರವರುಗಳ ಸಹಯೋಗದೊಂದಿಗೆ ಟೂರ್ನಮೆಂಟ್ ನ್ನು ನಡೆಸಲಾಯಿತು..

ಈ ಟೂರ್ನಮೆಂಟ್ ಅನ್ನು ಉಮೇಶ್ ಕುಮಾರ್, ಐಪಿಎಸ್ ಎಡಿಜಿಪಿ, ಕೆಎಸ್‍ಆರ್‍ಪಿ ಬೆಂಗಳೂರು ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಮತ್ತು ಸಂದೀಪ್ ಪಾಟೀಲ್, ಐಜಿಪಿ, ಕೆಎಸ್‍ಆರ್‍ಪಿ ಹಾಗೂ ಇತರ ಹಿರಿಯ ಅಧಿಕಾರಿಗಳ ಮಹತ್ವ ಪೂರ್ಣ ಕೊಡುಗೆ ಹಾಗೂ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಯಿತು.

Publisher: eSamudaay

Powered by