ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಟಿ.ಜಿ.ಶಿವಶಂಕರೇ ಗೌಡ ಅವರು ಇಂದು ವಯೋನಿವೃತ್ತಿ ಹೊಂದಿದ್ದು, ಉಚ್ಚ ನ್ಯಾಯಾಲಯದ ಸಭಾಂಗಣದ ಪ್ರಧಾನ ವೇದಿಕೆಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಅನು ಶಿವರಾಮನ್, ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ, ಭಾರತದ ಅಡಿಶಿನಲ್ ಸಾಲಿಸಿಟರ್ ಜನರಲ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಹರೀಶ್ ಎಂ.ಟಿ. ಸೇರಿದಂತೆ ಇತರ ಹಿರಿಯ ನ್ಯಾಯಾಧೀಶರು ಹಾಗೂ ವಕೀಲರು ಉಪಸ್ಥಿತರಿದ್ದರು.
Publisher: eSamudaay