ಬೆಂಗಳೂರು : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅಮ್ಮತ್ತಿ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ “ಕೊಡವ ಬಲ್ಯನಮ್ಮೆ” ಮೊದಲ ದಿನ, ಫೆಬ್ರವರಿ 27ರಂದು ಹತ್ತು ಹಲವು ಕೊಡವ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಈ ಪ್ರಯುಕ್ತ ಉಮ್ಮತ್ತಾಟ್ ಪೈಪೋಟಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡದಲ್ಲಿ ಒಟ್ಟು 12 ಜನ ಮಹಿಳೆಯರು ನೃತ್ಯ ಮಾಡುವವರು ಹಾಗೂ 4 ಜನ ಹಾಡುವವರಿದ್ದು ಒಟ್ಟು 16 ಜನರ ತಂಡ ಇದಾಗಿರಬೇಕು. ಸ್ಫರ್ಧೆಯ ಕಾಲಾವಕಾಶ 8 ನಿಮಿಷಗಳಾಗಿರುತ್ತದೆ. ಬೊಳಕಾಟ್ ಸ್ಪರ್ಧಾ ತಂಡದಲ್ಲಿ ಒಟ್ಟು 16 ಜನರಿದ್ದು 12 ಜನ ನೃತ್ಯಗಾರರು, 4 ಜನರು ಹಾಡುಗಾರರಾಗಿರಬೇಕು. ಕಾಲಾವಕಾಶವು 8 ನಿಮಿಷ ಆಗಿರುತ್ತದೆ.
ಕೋಲಾಟ್ ಒಟ್ಟು 16 ಜನರ ತಂಡವಾಗಿರತಕ್ಕದ್ದು. ಇವರಲ್ಲಿ 12 ಜನ ನೃತ್ಯಗಾರರು, 4 ಜನ ಹಾಡುಗಾರರಾಗಿರತಕ್ಕದ್ದು. ಕಾಲಾವಕಾಶವು 8 ನಿಮಿಷ ಆಗಿರುತ್ತದೆ. ಬಾಳೋಪಾಟ್ ಹಾಡುವವರು 4 ಜನರಿದ್ದು 8 ನಿಮಿಷಗಳ ಕಾಲಾವಕಾಶದಲ್ಲಿ ದೇಶಕೆಟ್ಟ್ ಪಾಟ್ ಇಲ್ಲವೆ ಕಾವೇರಮ್ಮೆಯ ಹಾಡನ್ನು ಹಾಡಲು ಅವಕಾಶ ನೀಡಲಾಗುವುದು. ಪರೆಯಕಳಿಯು 4 ನಿಮಿಷ ಸಮಯದ ಪೈಪೋಟಿಯಾಗಿದ್ದು ಇಬ್ಬರ ನಡುವೆ ನಡೆಯುವಂತ ಸ್ಪರ್ಧೆ ಆಗಿರುತ್ತದೆ.
ಸಮ್ಮಂಧ ಅಡ್‍ಕುವ ಸ್ಪರ್ಧೆಯು ಪುರುಷರಿಗೆ ಏರ್ಪಡಿಸಿದ್ದು 5 ನಿಮಿಷಗಳ ಕಾಲಾವಕಾಶದಲ್ಲಿ ಇಬ್ಬರು ಭಾಗವಹಿಸಲು ಅವಕಾಶವಿರುತ್ತದೆ. ಉರ್‍ಟಿಕೊಟ್ಟ್ ಆಟ್ ಒಟ್ಟು 14 ಜನರ ತಂಡವಾಗಿರಬೇಕು. ಇದರಲ್ಲಿ 12 ಜನ ನೃತ್ಯಗಾರ್ತಿಯರು ಇಬ್ಬರು ಹಾಡುಗಾರರಾಗಿದ್ದು ಸ್ಪರ್ಧೆಯು 8 ನಿಮಿಷಗಳ ಸಮಯ ಇರುತ್ತದೆ. ವಾಲಗತ್ತಾಟ್ ಸ್ಪರ್ಧೆಯನ್ನು ಮುಕ್ತವಾಗಿ ಏರ್ಪಡಿಸಲಾಗುವುದು. ಇದರಲ್ಲಿ ಪುರುಷರು ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ವಿಭಾಗವಿದ್ದು 60 ವರ್ಷದ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದು. ಅಂತೆಯೇ 18 ರಿಂದ 60 ವರ್ಷದವರೆಗಿನವರಿಗೆ ಪ್ರತ್ಯೇಕ ವಿಭಾಗವಿದ್ದು ಮುಕ್ತವಾಗಿ ಭಾಗವಹಿಸಬಹುದು. ಇದರ ಮೂರನೇ ವಿಭಾಗದಲ್ಲಿ 7 ರಿಂದ 18 ವರ್ಷದವರೆಗಿನ ಮಕ್ಕಳಿಗೆ ಸ್ಪರ್ಧಿಸಲು ಅವಕಾಶವಿದೆ.
ಕಪ್ಪೆಯಾಟ್ ಸ್ಪರ್ಧೆಯನ್ನು 7 ರಿಂದ 14 ವರ್ಷದ ಮಕ್ಕಳಿಗೆ ಏರ್ಪಡಿಸಲಾಗುವುದು. ಕೊಂಬ್-ಕೊಟ್ಟ್ ವಾಲಗ ನುಡಿಸುವ ಸ್ಪರ್ಧೆಗೆ 15 ನಿಮಿಷಗಳ ಕಾಲಾವಕಾಶವಿದ್ದು ಪುರುಷರು ಮುಕ್ತವಾಗಿ ಭಾಗವಹಿಸಬಹುದು. ಪಾನಿಕೆಟ್ಟ್, ಕೋರೆಕೆಟ್ಟ್, ವಸ್ತ್ರಕೆಟ್ಟ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಮೊದಲ ಸುತ್ತಿನಲ್ಲೇ ಅಚ್ಚುಕಟ್ಟಾಗಿ ಧಿರಿಸು ಕಟ್ಟುವವರನ್ನು ಆಯ್ಕೆ ಮಾಡಲಾಗುವುದು.
ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ತಂಡದ ಹೆಸರನ್ನು ವಿವರಗಳೊಂದಿಗೆ ಅಕಾಡೆಮಿ ಕಚೇರಿಯ 8762942976 ಮೊಬೈಲ್ ಸಂಖ್ಯೆಯ ಮೂಲಕ ತ್ವರಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಎಲ್ಲಾ ಸ್ಪರ್ಧೆಗಳೊಂದಿಗೆ ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ, ಕೊಡವ ಹಾಡುಗಾರಿಕೆ ಇನ್ನಿತರೆ ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳು ಕೊಡವ ಪ್ರಾಚ್ಯ ವಸ್ತುಗಳ ಪ್ರದರ್ಶನಕ್ಕೆ ಕೊಡವ ಬಲ್ಯನಮ್ಮೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರತಿಯೊಂದರಲ್ಲಿ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಅಕಾಡೆಮಿಯಿಂದ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: eSamudaay