ತೋಟಗಾರಿಕಾ ಬೆಳೆಗಳಲ್ಲಿ ಉತ್ತಮ ಗುಣಮಟ್ಟ ಹಾಗೂ ಇಳುವರಿಗಾಗಿ ಆಧುನಿಕ ನೀರಾವರಿ ಹಾಗೂ ರಸಾವರಿ ಪದ್ಧತಿಗಳು” ಕುರಿತು ತರಬೇತಿ ಕಾರ್ಯಕ್ರಮ

23 Jan, 2025

 

ಬೆಂಗಳೂರು :  ನಿಖರ ಬೇಸಾಯ ಅಭಿವೃದ್ಧಿ ಕೇಂದ್ರ, ತೋಟಗಾರಿಕೆ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ಹಾಗೂ ಯಲಹಂಕ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸರ್ವಿಸ್ ಟ್ರಸ್ಟ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ತೋಟಗಾರಿಕಾ ಬೆಳೆಗಳಲ್ಲಿ ಉತ್ತಮ ಗುಣಮಟ್ಟ ಹಾಗೂ ಇಳುವರಿಗಾಗಿ ಆಧುನಿಕ ನೀರಾವರಿ ಹಾಗೂ ರಸಾವರಿ ಪದ್ಧತಿಗಳು” ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಬೆಂಗಳೂರಿನ ಯಲಹಂಕ ಮಹಾಯೋಗಿ ಮೇಮನ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಮುನಿ ರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ನೀರಾವರಿಯಲ್ಲಿನ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೂಳ್ಳಲು ರೈತರನ್ನು ಪ್ರೋತ್ಸಾಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಹಾಲಿನ ಉತ್ಪಾದಕರ ಸಂಘದ  ಅಧ್ಯಕ್ಷರಾದ  ಡಾ.ಸಂಪಗಿ ರಾಮರೆಡ್ಡಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿ, ನೀರಾವರಿಯ ಹೂಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಬೆಳೆ ಉತ್ಪಾದನೆ ಹಾಗೂ ಬೆಳೆಯ ಗುಣಮಟ್ಟವನ್ನು ಹೆಚ್ಚಿಸುವುದರ ಬಗ್ಗೆ ರೈತರಿಗೆ ಮನದಟ್ಟು ಮಾಡಿದರು.

ಇದೇ ಸಂದರ್ಭದಲ್ಲಿ ಯಲಹಂಕ ಲಯನ್ಸ್ ಕ್ಲಬ್ ಸೇವಾ ಅಧ್ಯಕ್ಷರಾದ ಎಸ್.ಆರ್.ಜಯಪ್ರಕಾಶ್, ಸೂಕ್ಷ್ಮ ನೀರಿನ ಉಳಿತಾಯದ ಬಗ್ಗೆ ಮಾಹಿತಿ ನೀಡಿದರು, ಇದಲ್ಲದೆ ರಸಾವರಿ ಕುರಿತು ಉಪಯೋಗ ಹಾಗೂ ಅದರ ಅಳವಡಿಸಿಕೊಳ್ಳುವುದರ ಬಗ್ಗೆ ರೈತರಿಗೆ ಮನದಟ್ಟು ಮಾಡಿದರು. 

ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸಪ್ಪ.ಕೆ.ಎನ್, ಪ್ರಾಧ್ಯಾಪಕÀರು ಹಾಗೂ ಪ್ರಧಾನ ಸಂಶೋಧಕರು, ನಿಖರ ಕೃಷಿ ಅಭಿವೃದ್ಧಿಕೇಂದ್ರ, ತೋಟಗಾರಿಕೆ ವಿಭಾಗ, ಕೃಷಿ ಮಹಾವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು ಇವರು ಈ ಕಾರ್ಯಕ್ರಮದ ಆಯೋಜಕರಾಗಿದ್ದು ಪ್ರಾಸ್ತ್ತಾವಿಕ ನುಡಿಯನ್ನು ಪ್ರಸ್ತುತಪಡಿಸಿ ರೈತರಿಗೆ ಹೊಸ ತಂತ್ರಜ್ಞಾನಗಳಾದ ಸ್ವಯಂಚಾಲಿತ ನೀರಾವರಿ ಹಾಗೂ ರಸಾವರಿಯಕುರಿತು ಮಾಹಿತಿ ನೀಡಿದರು ಮತ್ತು ವಿವಿಧ ಸಂವೆದಕಗಳು, ಅವುಗಳ ವಿನ್ಯಾಸ, ಅದರ ಬಳಕೆ ವಿಧಾನ, ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.

Publisher: eSamudaay

Powered by