ನೂತನವಾಗಿ ನಿರ್ಮಿಸಿದ ನಗರ ಮತ್ತು ಉಪನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ.

21 Jan, 2025

 

ಬೆಂಗಳೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ, ಅವರು ಇಂದು ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಬಳಿ ನೂತನವಾಗಿ ನಿರ್ಮಿಸಲಾದ ನಗರ ಮತ್ತು ಉಪನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.

ಅಲ್ಲಿನ ಬಸ್ ನಿಲುಗಡೆ ಅಂಕಣಗಳು ಹಾಗೂ ಪ್ರಯಾಣಿಕರ ನಿರೀಕ್ಷಣಾ ಅಂಕಣಗಳು, ಪ್ರಯಾಣಿಕರಿಗೆ ನೂತನ ಮಾದರಿಯ ಆಸನಗಳ ವ್ಯವಸ್ಥೆ, ಪುರುಷರು ಹಾಗೂ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಸ್ಸುಗಳ ಆಗಮನ ನಿರ್ಗಮನಗಳ ಮಾಹಿತಿ ವ್ಯವಸ್ಥೆಯನ್ನು ಸಹ ಪರಿವೀಕ್ಷಣೆ ಮಾಡಿದರು.

ನಂತರ ಬಿ.ಆರ್.ಟಿ.ಎಸ್ ಬಸ್ಸುಗಳ ಅಂಕಣದಲ್ಲಿ ಬಸ್ಸುಗಳ ಸಾರಿಗೆ ಕಾರ್ಯಾಚರಣೆಗೆ ಚಾಲನೆ ನೀಡಿದರು. ನಂತರ ಮಹಿಳಾ ಪ್ರಯಾಣಿಕರೊಂದಿಗೆ ಚೆನ್ನಮ್ಮ ವೃತ್ತದಿಂದ ಗೋಕುಲ ರಸ್ತೆಯ ಪ್ರಾದೇಶಿಕ ಕಾರ್ಯಾಗಾರದವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದರು.
ಚೆನ್ನಮ್ಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣದಿಂದ ಸಂಸ್ಥೆಯ ಸೇವೆಯನ್ನು ಪ್ರಾರಂಭಿಸಲಾಗಿದ್ದು ಸಾರ್ವಜನಿಕ ಪ್ರಯಾಣಿಕರು ಸದಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಸಮಯದಲ್ಲಿ ಮುಖ್ಯ ಕಾಮಗಾರಿ ಅಭಿಯಂತರರಾದ ದಿವಾಕರ ಯರಗೊಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ, ಬಿ.ಆರ್.ಟಿ.ಎಸ್ ಪ್ರಧಾನ ವ್ಯವಸ್ಥಾಪಕರಾದ ಎಂ.ರಾಜಕುಮಾರ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಂ.ಸಿದ್ದಲಿಂಗೇಶ, ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಗುಡೆಣ್ಣವರ, ಸಹಾಯಕ ಕಾಮಗಾರಿ ಇಂಜಿನಿಯರ್ ಶಿವಕುಮಾರ, ರವ ಅಂಚಿಗಾವಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Publisher: eSamudaay

Powered by