ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

21 Jan, 2025

 

 ಬೆಂಗಳೂರು :

ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು.

ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
 
ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್.ಕಿರಣಗಿ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿ ಅಂದಿನ ಸಮಾಜದಲ್ಲಿ ಪ್ರಚಲಿತವಿದ್ದ ಮೂಢನಂಬಿಕೆ ಕಂದಾಚಾರ, ಡಂಬಾಚಾರ ಮತ್ತು ಶೋಷಣೆಯನ್ನು ತಮ್ಮ ವಚನಗಳ ಮೂಲಕ ನೇರ ನಿಷ್ಠುರವಾಗಿ ಅತ್ಯಂತ ಕಟು ಶಬ್ದಗಳಲ್ಲಿ ವಿರೋಧಿಸುವುದರ ಜೊತೆಗೆ ಎಲ್ಲರಿಗೂ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಪ್ರಸನ್ನ ಕುಮಾರ ಬಾಲಾನಾಯಕ್, ಎಸ್.ಎಸ್.ಮಾಲತಿ ಹಾಗೂ ಅಧಿಕಾರಿಗಳಾದ ರವಿ ಅಂಚಗಾವಿ, ನವೀನಕುಮಾರ ತಿಪ್ಪಾ, ಸುನೀಲ ಎಂ, ಆರ್.ಎಲ್.ಭಜಂತ್ರಿ, ತೈಸಿನ್ ಭಾನು ಪಟವೇಗಾರ, ಗುರುಪ್ರಸಾದ ಹೋಗಾಡೆ, ದಯಾನಂದ ಪಾಟೀಲ್ ರವರು ಮತ್ತು ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

Publisher: eSamudaay

Powered by