ಸಾವಯವ ಕೃಷಿಗೆ ಹೆಚ್ಚಿನ ಪ್ರಚಾರ ಅಗತ್ಯ– ಎನ್.ಚೆಲುವರಾಯಸ್ವಾಮಿ
ಬೆಂಗಳೂರು: ಕರ್ನಾಟಕ ಸರ್ಕಾರವು ಸುಮಾರು 2 ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ಪರ್ಯಾಯ ಪದ್ದತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲು 2004 ರಲ್ಲಿ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿರುತ್ತದೆ. ಈ ನೀತಿಯಡಿಯಲ್ಲಿ ರಾಜ್ಯಾದ್ಯಂತ ವಿವಿಧ ಸಾವಯವ ಕೃಷಿ ಉತ್ತೇಜನಾ ಕಾರ್ಯಕ್ರಮಗಳಾದ ಸಾವಯವ ಗ್ರಾಮ, ಪ್ರಮಾಣೀಕರಣ, ಸಂಸ್ಕರಣೆ ಮುಂತಾದ ಸಾವಯವ ಕೃಷಿ ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಇಂದು ಹೋಟೆಲ್ ರ್ಯಾಡಿಸನ್ ಬ್ಲೂ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ 2017ರಲ್ಲಿ ಪರಿಷ್ಕøತ ಸಾವಯವ ನೀತಿಯನ್ನು ಹೊರತರಲಾಗಿದ್ದು, ಅಂದಿನಿಂದ, ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು "ಪ್ರಜ್ಞಾವಂತ ಆಹಾರ"ವಾಗಿ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು 2017 ರಲ್ಲಿ ಆಯೋಜಿಸಿದ ಮೊದಲ ಆವೃತ್ತಿಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಮೂಲಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಪ್ರಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುತ್ತದೆ. ತದನಂತರ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಆವೃತ್ತಿಗಳನ್ನು ಕ್ರಮವಾಗಿ 2018, 2019, 2023 ಮತ್ತು 2024 ರಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿರುತ್ತದೆ.
ಇದೇ ಆಸಕ್ತಿಯನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಮತ್ತೊಮ್ಮೆ ಆರನೇ ಆವೃತ್ತಿಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ನ್ನು ಜನವರಿ 23 ರಿಂದ 25 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುತ್ತದೆ. ಈ ಮೇಳವು ರೈತರು, ರೈತ ಗುಂಪುಗಳು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು, ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ವೇದಿಕೆಯಾಗಿದೆ.
ಸಾವಯವ ಮತ್ತು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವುದರ ಜೊತೆಗೆ ರೈತರಿಗೆ - ಆಹಾರ, ಮೇವು, ಇಂಧನವಾಗಿ ಬಹು ಉಪಯೋಗ ಮತ್ತು ಬರಗಾಲದಲ್ಲಿ ರೈತರಿಗೆ ಉತ್ತಮ ಪರ್ಯಾಯ ನಿರ್ವಹಣಾ ತಂತ್ರ. ಗ್ರಾಹಕರಿಗೆ - ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಣೆ (ಕಬ್ಬಿಣ, ಸತು, ಫೆÇೀಲಿಕ್ ಆಮ್ಲ, ಕ್ಯಾಲ್ಸಿಯಂ ಕೊರತೆ ನೀಗಿಸಲು ಮುತ್ತು ಮಧುಮೇಹ ನಿಯಂತ್ರಣ), ಪರಿಸರಕ್ಕೆ - ಕಡಿಮೆ ನೀರಿನ ಅವಶ್ಯಕತೆ ಹೊಂದಿರುತ್ತದೆ. ಅತ್ಯಂತ ಶುಷ್ಕ ವಾತಾವರಣದಲ್ಲಿ ಬದುಕಬಲ್ಲವು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ಈ ಉದ್ದೇಶಗಳನ್ನು ಸಾಧಿಸುವಲ್ಲಿ ಗಮನಾರ್ಹ ಮೈಲುಗಲ್ಲುಗಳಾಗಿ ಪರಿಣಮಿಸಿವೆ.
ಸಾವಯವ ಮತ್ತು ಸಿರಿಧಾನ್ಯಗಳನ್ನು "ಭವಿಷ್ಯದ ಪೀಳಿಗೆಯನ್ನು ಪೆÇೀಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ" ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಸಿ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ರಾಜ್ಯ ಸರ್ಕಾರದ ಧ್ಯೇಯೋದ್ದೇಶವಾಗಿದೆ.
ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ - 18.37 ಲಕ್ಷ ಹೆಕ್ಟೇರ್, ಪ್ರಮುಖ ಸಿರಿಧಾನ್ಯಗಳು. 18.06 ಲಕ್ಷ ಹೆಕ್ಟೇರ್ (ರಾಗಿ - 8.27 ಲಕ್ಷ ಹೆಕ್ಟೇರ್, ಜೋಳ - 8.11 ಲಕ್ಷ ಹೆಕ್ಟೇರ್ ಮತ್ತು ಸಜ್ಜೆ - 1.68 ಲಕ್ಷ ಹೆಕ್ಟೇರ್) ಹಾಗೂ ಕಿರು/ಸಿರಿಧಾನ್ಯಗಳು - 0.31 ಲಕ್ಷ ಹೆಕ್ಟೇರ್ (ನವಣೆ, ಸಾಮೆ, ಕೊರಲೆ, ಹಾರಕ, ಬರಗು ಮತ್ತು ಊದಲು).
ಸಾವಯವ ಮತ್ತು ಸಿರಿಧಾನ್ಯಗಳ ಪೆÇ್ರೀತ್ಸಾಹಕ್ಕೆ ರಾಜ್ಯ ಸರ್ಕಾರವು ಹಲವು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
2024 ನೇ ಡಿಸೆಂಬರ್ 13 ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಆಯೋಜಿಸಲಾಗಿದ್ದ Curtain Raiser ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿರುತ್ತಾರೆ.
"ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅವರ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಅನುಭವವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜನವರಿ 7 ಮತ್ತು 8 ರಂದು ಸ್ಟರ್ಪ್ ಕ್ಯುಲಿನರಿ ಅಕಾಡೆಮಿ, ಬೆಂಗಳೂರು ಇಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ರಾಜ್ಯ ಮಟ್ಟದ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
“ಸಿರಿಧಾನ್ಯಗಳು: ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳು” ಶೀರ್ಷಿಕೆಯಡಿ ಪ್ಯಾನಲ್ ಚರ್ಚೆಯನ್ನು ಕ್ರಿಸ್ತು ಜಯಂತಿ ಕಾಲೇಜು ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ 10 ರಂದು ಆಯೋಜಿಸಲಾಗಿದ್ದು, ಆರೋಗ್ಯ ಪರಿಣಿತರು, ಪತ್ರಿಕೋದ್ಯಮಿಗಳು, ಕ್ರೀಡಾಪಟುಗಳು, ಸಿರಿಧಾನ್ಯ ಕೃಷಿಕರು ಮತ್ತು ವಿದ್ಯಾರ್ಥಿ ಸಮುದಾಯ ಚರ್ಚೆಯಲ್ಲಿ ಭಾಗವಹಿಸಿರುತ್ತಾರೆ.
ಜನವರಿ 16 ರಂದು ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತರು ಮತ್ತು ಕನ್ನಡದವರಾದ ರಿಕಿ ಕೇಜ್ ಇವರು ಸಂಯೋಜಿಸಲಾಗಿರುವ ಹಾಗೂ ಅಮೇರಿಕಾ ದೇಶದ ಮೂರು ಬಾರಿ ಗ್ರಾಮಿ ಪ್ರಶಸ್ತಿಯನ್ನು ಪಡೆದ ಲೋನಿ ಪಾರ್ಕ್ ರವರು ಹಾಗೂ ಸಿದ್ಧಾರ್ಥ ಬಸರೂರು ರವರು ದನಿ ನೀಡಿರುವ "ದೇಶಿ ತಳಿಗಳ" ಗೀತೆಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಬಿಡುಗಡೆಗೊಳಿಸಿದರು. ಈ ಗೀತೆಗೆ ಯು-ಟ್ಯೂಬ್‍ನಲ್ಲಿ ಇದುವರೆಗೆ 6 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯಾಗಿರುತ್ತದೆ. ಅಲ್ಲದೇ, ದೇಶಿತಳಿಗಳನ್ನು ಸಂರಕ್ಷಿಸುವಲ್ಲಿ ರಾಜ್ಯದ ಅಸಾಧಾರಣ ಹೆಜ್ಜೆಗೆ ವಿಶ್ವಸಂಸ್ಥೆಯ ಭಾಗವಾದ ಯುಎನ್‍ಸಿಸಿಡಿ ಇವರು ಉತ್ತೇಜಿತರಾಗಿದ್ದಾರೆ.
ಹೋಟೆಲ್ / ರೆಸ್ಟೋರೆಂಟ್‍ಗಳ ಆಹಾರ ಪಟ್ಟಿಯಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸಲು, ಇತ್ತೀಚಿನ ಪೀಳಿಗೆ ಹಾಗೂ ಗ್ರಾಹಕರಲ್ಲಿ ಅಭಿರುಚಿ/ಸಕಾರಾತ್ಮಕ ಪ್ರಭಾವ ಬೀರುವಂತಹ ಪರಿಣಾಮಕಾರಿ ಮಾರ್ಗಗಳ ಕುರಿತು ಚರ್ಚಿಸುವ ಮುಖ್ಯ ಉದ್ದೇಶದೊಂದಿಗೆ "ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ'ವನ್ನು ಎಂ.ಎಸ್.ರಾಮಯ್ಯ ಕಾಲೇಜು, ಬೆಂಗಳೂರು ಇವರ ಸಹಯೋಗದೊಂದಿಗೆ ಜನವರಿ 17 ರಂದು ಆಯೋಜಿಸಲಾಗಿರುತ್ತದೆ.
ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಜನವರಿ 19 ರಂದು ಕಬ್ಬನ್ ಪಾರ್ಕ್ ನಲ್ಲಿ "ಸಿರಿಧಾನ್ಯ ಓಟ" ವನ್ನು ಆಯೋಜಿಸಲಾಗಿದ್ದು, ಸುಮಾರು 4000 ಸಾರ್ವಜನಿಕರು ಭಾಗವಹಿಸಿರುತ್ತಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್" ಅನ್ನು ರೂ. 20.00 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಜನವರಿ 23 ರಂದು ಮುಖ್ಯಮಂತ್ರಿಯವರಿಂದ ಚಾಲನೆ ನೀಡಲು ಯೋಜಿಸಲಾಗಿದೆ.ಎಲ್ಲಾ ಜಿಲಾ ಕೇಂದ್ರಗಳಲ್ಲಿ ಸಿರಿಧಾನ್ಯ ಓಟ/ನಡಿಗೆ, ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಮೂರು ದಿನದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ:
ಈ ಮೇಳದಲ್ಲಿ 300 ಕ್ಕೂ ಹೆಚ್ಚು ಹವಾನಿಯಂತ್ರಿತ ಸಾವಯವ ಮತ್ತು ಸಿರಿಧಾನ್ಯಗಳ ಮಳಿಗೆಗಳು ಇರಲಿವೆ. ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.
ಅಂತರರಾಷ್ಟ್ರೀಯ ಸಮ್ಮೇಳನವನ್ನು GIZ, Germany ಹಾಗೂ FiBL, Switzerland ಸಂಸ್ಥೆಗಳ ಸಹಯೋಗಹದೊಂದಿಗೆ "Transformation of agrifood systems through agroecology: A global and regional perspective" ಎಂಬ ಶೀರ್ಷಿಕೆಯಡಿ ಸಮ್ಮೇಳನದಲ್ಲಿ 30 ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ.
ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಉತ್ಪಾದಕರ-ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಬಿ2ಬಿ ಸಭೆಗೆ ಈಗಾಗಲೇ 141 ಕೊಳ್ಳುವವರು ಮತ್ತು 125 ಮಾರಾಟಗಾರರು ನೋಂದಣಿ ಮಾಡಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಮಾರುಕಟ್ಟೆದಾರರು, ಎಫ್‍ಪಿಓ / ಒಕ್ಕೂಟಗಳು ಭಾಗವಹಿಸಲಿದ್ದಾರೆ.
ಕರ್ನಾಟಕದ ಪೆವಿಲಿಯನ್‍ನಲ್ಲಿ ಕರ್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ನವೋದ್ಯಮಿಗಳು ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ರೈತ ಉತ್ಪಾದಕ ಗುಂಪುಗಳು (ಎಫ್‍ಪಿಓಗಳು), ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಸುಮಾರು 115 ಮಳಿಗೆಗಳು ಇರುತ್ತವೆ. ಐಎಂಆರ್, ಸಿಎಫ್‍ಟಿಆರ್‍ಐ, ಎನ್‍ಐಎಫ್‍ಟಿಇಎಂ, ಯುಎಎಸ್‍ಬಿ ಮುಂತಾದ ಸಂಸ್ಥೆಗಳಿಂದ ಸಂಸ್ಮರಣೆ, ಮೌಲ್ಯವರ್ಧನೆ ಹಾಗೂ ಇನ್ನಿತರೆ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಇರುತ್ತದೆ.
ರಾಜ್ಯದ ರೈತರಿಗಾಗಿ ಕನ್ನಡ ಭಾμÉಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ರೈತರ ಕಾರ್ಯಾಗಾರ ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಸಾವಯವ, ನೈಸರ್ಗಿಕ, ದೇಸಿ ತಳಿಗಳು, ಸಿರಿಧಾನ್ಯಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ.
ಮೂರು ದಿನಗಳ ಮೇಳದ ಅವಧಿಯಲ್ಲಿ ವಿವಿಧ ಹೋಟಲ್/ ರೆಸ್ಟೋರೆಂಟ್ ಗಳ ಮಳಿಗೆಗಳಲ್ಲಿ ವೈವಿದ್ಯಮಯ ಮತ್ತು ರುಚಿಕರವಾದ ಸಾವಯವ ಹಾಗೂ ಸಿರಿಧಾನ್ಯಗಳ ಊಟ, ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಸಾವಯವ ಮತ್ತು ಸಿರಿಧಾನ್ಯ ಆಹಾರ ಮಳಿಗೆಗಳು (ಪುಡ್ ಕೋರ್ಟ್) ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೇ ವಿವಿಧ ದೇಸಿ/ಗ್ರಾಮೀಣಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಮೇಳದ ವೈಶಿಷ್ಟ್ಯ:
ತಲೆಮಾರುಗಳಿಂದ ರೈತರು ತಾವು ಕಾಪಾಡಿಕೊಂಡು, ಪೋಷಿಸಿದ ದೇಶೀ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ದೇಶೀ ಪೆವಿಲಿಯನ್‍ನಲ್ಲಿ ರಾಜ್ಯದ ಆಯ್ದ 15 ಜಿಲ್ಲೆಗಳಿಂದ 30 ದೇಶೀ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ. ದೇಶೀ ಪೆವಿಲಿಯನ್‍ನಲ್ಲಿ ರೈತರು ಸಂರಕ್ಷಿಸಿರುವ ವಿವಿಧ ಬೆಳೆಗಳ ಬಿತ್ತನೆ ಬೀಜ / ತೆನೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಣ್ಣಿನ ಲೋಕ - ಸಸ್ಯಗಳ ಬೆಳವಣಿಗೆಗೆ ಮಣ್ಣು ಪ್ರಮುಖ ಆಧಾರವಾಗಿರುವುದರಿಂದ, ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಮಣ್ಣಿನ ಮಹತ್ವ, ಗುಣಲಕ್ಷಣಗಳು, ವರ್ಗೀಕರಣ ಮತ್ತು ರಚನೆಯ ಕುರಿತು ಅರಿವು ಮೂಡಿಸುವುದು ಅತ್ಯಾವಶ್ಯವಾಗಿದೆ. ಈ ಉದ್ದೇಶದಿಂದ, ಮಣ್ಣಿನ ಪೆಡಾನ್ ಪೆವಿಲಿಯನ್ ಅನ್ನು ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ - 2025 ರಲ್ಲಿ ಪರಿಚಯಿಸಲಾಗಿದೆ. ಕರ್ನಾಟಕ ರಾಜ್ಯದ ವಿವಿಧ ಬಗೆಯ ಮಣ್ಣಿನ monolith ಗಳನ್ನು ಪ್ರದರ್ಶಿಸಲಾಗುವುದು.
ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜರ್ಮನಿ, ಸ್ವಿಟ್ಟರ್‍ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯ, ಕೀನ್ಯಾ ತಾಂಜೇನಿಯ, ಇಟಲಿ, ಇಂಗ್ಲೆಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇಲಾಖೆಯ ಅಧಿಕಾರಿಗಳ ತಂಡ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದ್ದು, 25 ರಾಜ್ಯಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಇನ್ನೂ 2-3 ರಾಜ್ಯಗಳು ಭಾಗವಹಿಸುವ ನಿರೀಕ್ಷೆಯಿರುತ್ತದೆ. ಅಲ್ಲದೇ, 8 ಹೊರ ರಾಜ್ಯಗಳ ಕೃಷಿ ಸಚಿವರು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಇನ್ನೂ 1-2 ಸಚಿವರು ಭಾಗವಹಿಸುವ ನಿರೀಕ್ಷೆಯಿರುತ್ತದೆ ಎಂದು ತಿಳಿಸಿದರು.
ರಾಜ್ಯ, ಹೊರ ರಾಜ್ಯ ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯ / ಸಾವಯವ ಉತ್ಪನ್ನಗಳ ಸಂಸ್ಥೆಗಳು, ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಲಿದ್ದು, ಹೊರ ರಾಜ್ಯಗಳ 17 ಇಲಾಖೆಗಳು ಮತ್ತು 7 ಸಂಸ್ಥೆಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿರುತ್ತಾರೆ ಎಂದು ಸಚಿವರು ತಿಳಿಸಿದರು.
Publisher: eSamudaay