ಜನವರಿ 26ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಜನವರಿ 16ರಿಂದ 27ರ ವರಗೆ “ಆದಿ ಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯಡಿ 217ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿ ವಿಶೇಷವಾಗಿ 85 ತಳಿಯ ವಿವಿಧ ಹೂಗಳನ್ನು ಬಳಕೆ ಮಾಡಲಾಗಿದ್ದು, ಸುಮಾರು 32 ಲಕ್ಷ ಹೂಗಳಿಂದ ಮಹರ್ಷಿ ವಾಲ್ಮೀಕಿ ಕಾಲಾವಧಿಯಲ್ಲಿ ಶ್ರಮಿಸಿದ ವಿಶೇಷ ಸ್ಥಳಗಳ ಪ್ರಾತ್ಯಕ್ಷಿಕೆಗಳು, ಹಾಗೂ ಹಲವಾರು ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಉದ್ದೇಶಿಸಲಾಗಿದೆ.
ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ:
1820ರಲ್ಲಿ ಪ್ರಾರಂಭವಾದ ಅಗ್ರಿ-ಹಾರ್ಟಿಕಲ್ಟರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿದ್ದ ವಿಲಿಯಂ ಮನ್ರೊ ಎಂಬ ಅಧಿಕಾರಿಯ ವರದಿಗಳು, 1838-39ರಲ್ಲಿ, ಲಾಲ್‍ಬಾಗ್ ತೋಟದಲ್ಲಿ ವಿವಿಧ ಬಗೆಯ ಪ್ರದರ್ಶನಗಳು ನಡೆದು, ವಿಜೇತರಿಗೆ ಬಹುಮಾನ ವಿತರಣೆಯಾಗಿರುವ ಬಗ್ಗೆ ಉಲ್ಲೇಖಿಸುತ್ತವೆ. 1867ನೇ ಫೆಬ್ರವರಿ 16 ಮತ್ತು 17 ರಂದು ಶನಿವಾರ, ಭಾನುವಾರ, ಎರಡು ದಿನಗಳ ಪ್ರಥಮ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದ ವಿಜೇತರಿಗೆ ಬೆಳ್ಳಿ ಮತ್ತು ಕಂಚಿನ ಬಹುಮಾನಗಳನ್ನು ವಿತರಿಸಲಾಗಿತ್ತು. ಈ ವಿಚಾರಗಳು 1867ರ ಮೈಸೂರು ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟವಾಗಿರುವುದರಿಂದ, ಇದೇ ಲಾಲ್‍ಬಾಗ್‍ನಲ್ಲಿ ನಡೆದ ಪ್ರಥಮ ಫಲಪುಷ್ಪ ಪ್ರದರ್ಶನವಾಗಿದೆ.
ಲಾಲ್‍ಬಾಗ್‍ನ ಸೂಪರಿಂಟೆಂಡೆಂಟರಾಗಿದ್ದ ಜಾನ್ ಕ್ಯಾಮರಾನ್ ನೇತೃತ್ವದಲ್ಲಿ, ಲಾಲ್‍ಬಾಗ್‍ನಲ್ಲಿ ದೇಶ-ವಿದೇಶಿ ಸಸ್ಯ ಪ್ರಭೇದಗಳನ್ನು ನಮ್ಮ ವಾತಾವರಣಕ್ಕೆ ಹೊಂದಿಸುವ ಮೂಲ ಉದ್ದೇಶದಿಂದ 1889-91ರ ಅವಧಿಯಲ್ಲಿ ಗಾಜಿನ ಮನೆಯನ್ನು ನಿರ್ಮಿಸಲಾಯಿತು. ನಂತರದಲ್ಲಿ ಗಾಜಿನ ಮನೆಯಲ್ಲಿಯೇ ಫಲಪುಷ್ಪ ಪ್ರದರ್ಶನಗಳನ್ನು ಆಯೋಜಿಸಲು ಪ್ರಾರಂಭಿಸಲಾಯಿತು. ಗಾಜಿನ ಮನೆಯು ಇದುವರೆಗೆ ಸುಮಾರು 216ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಹಾಗೂ ಹಲವಾರು ಐತಿಹಾಸಿಕ ರಾಜ್ಯದ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭಗಳಿಗೆ ವೇದಿಕೆಯಾಗಿ ಪ್ರಸಿದ್ದಿ ಪಡೆದಿದೆ. 1912ನೇ ಇಸವಿಯಲ್ಲಿ ಅಂದಿನ ಲಾಲ್‍ಬಾಗ್ ಮೇಲ್ವಿಚಾರಕರಾಗಿದ್ದ ಜಿ.ಹೆಚ್.ಕೃಂಬಿಗಲ್ ಅವರು ಬೆಂಗಳೂರು ನಗರದ ಪ್ರಮುಖರನ್ನು ಹಾಗೂ ಅಂದಿನ ಮೈಸೂರು ಸಂಸ್ಥಾನದ ತೋಟಗಾರಿಕೆ ಪರಿಣಿತರು ಹಾಗೂ ಉತ್ಸಾಹ ಶಾಲಿಗಳನ್ನು ಸೇರಿಸಿಕೊಂಡು, ಅಲಂಕಾರಿಕ ತೋಟಗಾರಿಕೆಗೆ ಒತ್ತು ನೀಡಲು ಪ್ರಾರಂಭಿಸಿದರು. ಮೊದಲಿಗೆ ಮೈಸೂರು ಸಂಸ್ಥಾನ, ನಂತರ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಈವರೆಗೆ, 212 ಫಲಪುಷ್ಪ ಪ್ರದರ್ಶನಗಳನ್ನು ಪೂರೈಸಿತ್ತು. ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜನೆಗೊಂಡ ಹಿಂದಿನ 3 ಪ್ರದರ್ಶನಗಳನ್ನು ಒಳಗೊಂಡಂತೆ ಈವರೆಗೆ 216 ಪ್ರದರ್ಶನಗಳು ಜರುಗಿದ್ದು, ಪ್ರಸ್ತುತ ಪ್ರದರ್ಶನವು 217ನೇ ಪ್ರದರ್ಶನವಾಗಿರುತ್ತದೆ. ಫಲಪುಷ್ಪ ಪ್ರದರ್ಶನದ ಕ್ಷೇತ್ರದಲ್ಲಿ, ರಾಷ್ಟ್ರಮಟ್ಟದಲ್ಲμÉ್ಟೀ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೊಂದು ದಾಖಲೆಯಾಗಿದೆ.
ಅಮೇರಿಕಾ, ಲಂಡನ್‍ನ 'ಕ್ಯೂ' ಗಾರ್ಡನ್ನಿನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ 'ಚಲ್ಲಿ' ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‍ಬಾಗ್‍ನ ಫಲಪುಷ್ಪ ಪ್ರದರ್ಶನಗಳು ಜಾಗತಿಕವಾಗಿ 3ನೇ ಸ್ಥಾನ ಪಡೆದಿರುವುದು ರಾಷ್ಟ್ರ ಹಾಗೂ ರಾಜ್ಯದ ಹೆಗ್ಗಳಿಕೆಯಾಗಿದೆ.
ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನ:
ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಈ ಪ್ರದರ್ಶನಗಳನ್ನು 'ಬೇಸಿಗೆ' ಮತ್ತು 'ಚಳಿಗಾಲದ' ಪ್ರದರ್ಶನಗಳೆಂದು ಕರೆಯಲಾಗುತ್ತಿತ್ತು. 1951 ರಿಂದ ಈಚೆಗೆ, ಎರಡು ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಏರ್ಪಡಿಸುವುದರಿಂದ, ಈ ಪ್ರದರ್ಶನಗಳನ್ನು 'ಗಣರಾಜ್ಯೋತ್ಸವ' ಮತ್ತು 'ಸ್ವಾತಂತ್ರೋತ್ಸವ' ಫಲಪುಷ್ಪ ಪ್ರದರ್ಶನಗಳೆಂದು ಕರೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತ ವಿಶೇಷ ಪ್ರದರ್ಶನಗಳು ವೈಭವ ಪೂರ್ಣವಾಗಿ ಆಯೋಜನೆಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಅಪೂರ್ವ ಸಂಚಲನೆಯನ್ನು ಉಂಟು ಮಾಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.
ಈ ಸಾಲಿನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ "ಆದಿಕವಿ ಮಹರ್ಷಿ ವಾಲ್ಮೀಕಿ" ಪರಿಕಲ್ಪನೆಯಡಿ 2025ನೇ ಜನವರಿ 16 ರಿಂದ 27 ರವರೆಗೆ 12 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಗಾಜಿನ ಮನೆಯ ಒಳಾಂಗಣದ ವಿಶೇಷಗಳು:
"ಆದಿಕವಿ ಮಹರ್ಷಿ ವಾಲ್ಮೀಕಿ" ಪರಿಕಲ್ಪನೆಯಡಿ ಜರುಗುತ್ತಿರುವ ಗಣರಾಜ್ಯೋತ್ಸವ 217ನೇ ವಿಶೇಷ ಫಲಪುಷ್ಪ ಪ್ರದರ್ಶನದ ಅಂಗವಾಗಿ, ಗಾಜಿನ ಮನೆಯ ಒಳಾಂಗಣದಲ್ಲಿ ರೂಪಿಸಲಾಗಿರುವ ಪ್ರಮುಖ ಆಕರ್ಷಣೆಗಳು:
ಗಾಜಿನ ಮನೆಯ ಪ್ರದೇಶದಲ್ಲಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂ ಜೋಡಣೆ ಮತ್ತು ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ:
ಗಾಜಿನ ಮನೆಯ ಪ್ರವೇಶದ್ವಾರದ ಬಳಿಯ ಕೇಂದ್ರ ಭಾಗದಲ್ಲಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯು ಈ ಬಾರಿ ಹಲವು ವಿನೂತನ ಪರಿಕಲ್ಪನೆಯಡಿ ಪ್ರದರ್ಶಿಸಲಿದೆ. ಎಕ್ಸಾಟಿಕ್ ಆರ್ಕಿಡ್ಸ್‍ಗಳಾದ ಪೆಲನಾಪ್ಲಿಸ್, ಡೆಂಡೋಬಿಯಂ, ವಾಂಡಾ, ಮೊಕಾರಾ, ಕ್ಯಾಟ್ನಲಿಯಾ, ಆನ್ಸಿಡಿಯಂಗಳು, ಬಗೆಬಗೆಯ ಆಕರ್ಷಕ ಮಿನಿಯೇಚರ್ ಆಂಥೋರಿಯಂಗಳು, ಕ್ಯಾಲಾಲಿಲ್ಲಿ, ಹೊಸ ಬೊಮಿಲಿಯಾಡ್ ಬಗೆಗಳು, ವೈವಿಧ್ಯಮಯ ಜಿರೇನಿಯಂಗಳು ವಿವಿಧ ಬಗೆಯ ಎಕ್ಸಾಟಿಕ್ ಹೂವುಗಳನ್ನು, ವಿವಿಧ ಫೆÇೀಲಿಯೇಜ್ ಗಿಡಗಳ ನಡುವೆ ಜೋಡಿಸಲಾಗಿದೆ. ಒಟ್ಟಾರೆ 1.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗುವುದು.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಲ್ಮೀಕ) ಮಾದರಿ:
ಮಹರ್ಷಿ ವಾಲ್ಮೀಕಿ ಎಂದರೆ ಎಲ್ಲರ ಚಿತ್ರದಲ್ಲಿ ಮೂಡುವ ಚಿತ್ರಣ ಹುತ್ತ. ಹುತ್ತ ಪದಕ್ಕೆ ಸಂಸ್ಕøತದಲ್ಲಿ ವಲ್ಮೀಕ ಎನ್ನುತ್ತಾರೆ. ವಲ್ಮೀಕದಿಂದ ಹುಟ್ಟಿದವ ಅಥವಾ ಮೂಡಿದವ ವಾಲ್ಮೀಕಿ. ಹುತ್ತವೆಂದರೆ ದೃಢಚಿತ್ತಕ್ಕೆ, ಏಕಾಗ್ರತೆಗೆ, ತಪಸ್ಸಿಗೆ, ಸಂಕಲ್ಪಕ್ಕೆ, ಸಾಧನೆಗೆ ಸಂಕೇತ. ವಾಲ್ಮೀಕಿ ಮಹರ್ಷಿಗಳು ನಾರದರಿಂದ ನಿರ್ದೇಶಿಸಲ್ಪಟ್ಟು, ರಾಮನಾಮ ಜಪಿಸುತ್ತಾ ತಪಸ್ಸನ್ನು ಕೈಗೊಂಡರು. ಅವರ ಏಕಾಗ್ರತೆ ಮತ್ತು ಬದ್ದತೆ ಎμÉ್ಟೂಂದು ದೃಢವಾಗಿತ್ತೆಂದರೆ, ಸುತ್ತ ಹುತ್ತ ಬೆಳೆದು, ಅವರು ಅದರೊಳಗೆ ಸೇರಿ ಹೋದರೂ ಅವರ ಮನಸ್ಸು ಚಂಚಲವಾಗಿರಲಿಲ್ಲ. ಮತ್ತೆ ನಾರದ ಮಹರ್ಷಿಗಳ ಪ್ರೇರಣೆಯಿಂದಾಗಿ ತಮ್ಮ ಸಾಧನೆಯಿಂದ ಹೊರಬಂದು, ಲೋಕ ಕಲ್ಯಾಣಾರ್ಥವಾಗಿ “ರಾಮಾಯಣ” ಮಹಾಕಾವ್ಯವನ್ನು ರಚಿಸುತ್ತಾರೆ. ರಾಮಾಯಣದಂತಹ ವಿಶ್ವಕಾವ್ಯವು ರಚಿತವಾಗಬೇಕೆಂದರೆ ವಾಲ್ಮೀಕಿಯ ದೃಢಸಂಕಲ್ಪ ಮತ್ತು ಸಾಧನೆಯೇ ಕಾರಣ. ಮಹರ್ಷಿ ವಾಲ್ಮೀಕಿ ದೃಢತಪಸ್ಸನ್ನು ಸಂಕೇತಿಸುವ ರೀತಿಯಲ್ಲಿ ಬೃಹತ್ ಹುತ್ತದ ಮಾದರಿಯನ್ನು ಗಾಜಿನಮನೆಯ ಕೇಂದ್ರಭಾಗದಲ್ಲಿ ನಿರ್ಮಿಸಿ ಪ್ರದರ್ಶಿಸಲಾಗುವುದು. ಈ ಕಲಾಕೃತಿಯ ಪೀಠಭಾಗ ಸುಮಾರು ಹತ್ತು ಅಡಿಗಳ ಎತ್ತರವಿದ್ದು, ಅದರ ಮೇಲೆ ಸುಮಾರು ಹದಿನಾಲ್ಕು ಅಡಿ ಅಗಲ, ಮತ್ತು ಹದಿನೈದು ಅಡಿ ಎತ್ತರದ ಹುತ್ತವನ್ನು ಫೈಬರ್ ಹಾಗೂ ಪೂರಕ ವಸ್ತುಗಳಿಂದ ನಿರ್ಮಿಸಲಾಗಿರುತ್ತದೆ. ಪೀಠಭಾಗವು ಲಕ್ಷಾಂತರ ಹೂವುಗಳಿಂದ ಅಲಂಕೃತವಾಗಿರುತ್ತದೆ.
ಪೀಠಭಾಗವು 10 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯನ್ನು ಹೊಂದಿದ್ದು, ಪೀಠದ ಸುತ್ತಲಿನ 10 ಅಡಿ ಇಳಿಜಾರು ಪ್ರದೇಶವನ್ನು ವೃತ್ತಾಕಾರದ ಅಲೆಗಳ ಮಾದರಿಯಲ್ಲಿ ಸ್ಟೀಲ್ ಪೈಪ್ಸ್, ಮೆಗಳಿಂದ ನಿರ್ಮಿಸುವ ಫ್ಯಾಬ್ರಿಕೇಷನ್ ಕಾರ್ಯವನ್ನು ಕೈಗೊಳ್ಳಲಾಗಿದೆ. ಬೇಸ್‍ಗೆ ಪ್ಲೋರಲ್ ಫೆÇೀಮ್ಸ್ ಅಳವಡಿಸಿ ಆಕರ್ಷಕ ಬಣ್ಣಗಳ ಡಚ್ ಗುಲಾಬಿ ಹಾಗೂ ವಿವಿಧ ಬಣ್ಣಗಳ ಸೇವಂತಿಗೆ ಹೂಗಳನ್ನು ಬಳಸಿ ಆಕರ್ಷಕ ರೂಪವನ್ನು ನೀಡಲಾಗುತ್ತದೆ. ಒಂದು ಬಾರಿಗೆ 1.5 ಲಕ್ಷ ಡಚ್ ಗುಲಾಬಿ, 400 ಕಿ.ಗ್ರಾಂ ಪಿಂಚ್ ಗುಲಾಬಿ ಹಾಗೂ 300 ಕಿ.ಗ್ರಾಂ ಹೈದರಾಬಾದ್ ಸೇವಂತಿಗೆ ಹೂಗಳನ್ನು ಬಳಸಲಾಗುವುದು. ಒಟ್ಟು 2 ಬಾರಿಗೆ 3 ಲಕ್ಷ ಡಚ್ ಗುಲಾಬಿ ಹೂಗಳು, 800 ಕಿ.ಗ್ರಾಂ ಪಿಂಚ್ ಗುಲಾಬಿ ಹೂಗಳು ಹಾಗೂ 600 ಕಿ.ಗ್ರಾಂ ಹೈದರಾಬಾದ್ ಸೇವಂತಿಗೆ ಹೂಗಳನ್ನು ಬಳಸಲಾಗುವುದು. ಈ ಪರಿಕಲ್ಪನೆಗೆ ಹೂ ಜೋಡಣಾ ಕಾರ್ಯವನ್ನು ಮೆ|| ಸ್ನೇಹಾ ಫೆÇ್ಲೀರಿಸ್ಟ್‍ನ ಕಾಳಿದಾಸ್ ರವರು ಕೈಗೊಳ್ಳಲಿದ್ದಾರೆ.
ಬೃಹತ್ ಹುತ್ತದ (ವಲ್ಮೀಕ) ಕಲಾಕೃತಿಯ ಮುಂದೆ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ:
ಗಾಜಿನ ಮನೆಯ ಕೇಂದ್ರಭಾಗದಲ್ಲಿ ಪ್ರದರ್ಶನಗೊಳ್ಳುವ ಬೃಹತ್ ಹುತ್ತದ (ವಲ್ಮೀಕ) ಕಲಾಕೃತಿಯ ಮುಂಭಾಗದಲ್ಲಿ ಸುಮಾರು ಹತ್ತು ಅಡಿ ಎತ್ತರದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸುಮಾರು ಆರು ಅಡಿ ಪೀಠದ ಮೇಲೆ ಅನಾವರಣಗೊಳ್ಳಲಿದೆ. ಮಹರ್ಷಿ ವಾಲ್ಮೀಕಿಗಳು ರಾಮಾಯಣ ಕಾವ್ಯರಚನೆಯಲ್ಲಿ ನಿರತರಾಗಿರುವ ಭಂಗಿಯಲ್ಲಿ ಇರುವ ಪ್ರತಿಮೆ ಇದಾಗಿರಲಿದೆ. ಇದನ್ನು ಯುವಕಲಾವಿದ ಮಹದೇವ ರವರು ಕೈಗೊಳ್ಳಲಿದ್ದಾರೆ.
ಗಾಜಿನ ಮನೆಯ ಕೇಂದ್ರಭಾಗದ ಎಡಬದಿಗೆ ಮಹರ್ಷಿ ವಾಲ್ಮೀಕಿಯವರ ಆಶ್ರಮದ ಪುಷ್ಪ ಮಾದರಿ ಮತ್ತು ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶದ ಪ್ರದರ್ಶನ:
ಗಾಜಿನ ಮನೆಯ ಕೇಂದ್ರಭಾಗದ ಎಡಬದಿಯಲ್ಲಿ ನೇಪಾಳದ ಚಿತ್ವಾನ್ ಜಿಲ್ಲೆಯ, ಚಿತ್ವಾನ್ ನ್ಯಾಷನಲ್ ಪಾರ್ಕ್ ಉದ್ಯಾನದಲ್ಲಿ, ತಮಸಾ, ಸೋನಾ ಮತ್ತು ಗಂಡಕಿ ನದಿಗಳ ತ್ರಿವೇಣಿ ಸಂಗಮದಲ್ಲಿರುವ ವಾಲ್ಮೀಕಿ ಆಶ್ರಮದಲ್ಲಿರುವ ವಾಲ್ಮೀಕಿ ದೇವಾಲಯದ ಪುಷ್ಪಮಾದರಿ ಪ್ರದರ್ಶನಗೊಳ್ಳಲಿದೆ. ಇದೇ ಆಶ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳು ನೆಲೆಸಿದ್ದರೆಂದು, ಇಲ್ಲಿಯೇ ರಾಮಾಯಣ ರಚನೆಯಾಯಿತೆಂದು ಮತ್ತು ಲವಕುಶರನ್ನು ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ಬೆಳೆಸಿ, ಸಕಲ ವಿದ್ಯಾವಂತರನ್ನಾಗಿಸಿದರೆಂದು ಹೇಳಲಾಗಿದೆ. ಸುಮಾರು ಹದಿನೈದು ಅಡಿ ಎತ್ತರದ ಈ ಪುಷ್ಪ ಕಲಾಕೃತಿಯ ಮುಂದೆ. ರಾಮಾಯಣ ರಚನೆಗೆ ಕಾರಣವಾದ, ಬೇಡ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಕೊಲ್ಲುವುದು, ಅದರಿಂದ ಶೋಕಗೊಂಡ ವಾಲ್ಮೀಕಿಗಳ ಬಾಯಿಂದ 'ಮಾ ನಿμÁದ ಪ್ರತಿμÁ್ಠಂ ತ್ವಮಗಮಃ ಶಾಶ್ವತೀಃ ಸಮಾ। ಯತ್ಕಂಚಮಿಥುನಾದೇಕಮ್ ಅವಧೀಃ ಕಾಮಮೋಹಿತಮ್' ಎಂಬ ಶೋಕದ ಮಾತುಗಳು ಅನುಷ್ಟು ಛಂದಸ್ಸಿನ ಶ್ಲೋಕದಲ್ಲಿ ಹೊಮ್ಮಿ, ನಂತರ ಇಡೀ ರಾಮಾಯಣ ಮಹಾಕಾವ್ಯ ಅದೇ ಛಂದಸ್ಸಿನಲ್ಲಿ ರಚಿತವಾಗುವುದು. ಈ ಸನ್ನಿವೇಶವನ್ನು ಬಿಂಬಿಸುವ ಕಲಾಕೃತಿಯನ್ನು ಪ್ರದರ್ಶಿಸಲಾಗುವುದು. ಈ ಕಲಾಕೃತಿಯ ಸುತ್ತಲೂ ರಾಮಾಯಣದ ಆಯ್ದ ಪಾತ್ರಧಾರಿಗಳ ಮತ್ತು ಸನ್ನಿವೇಶಗಳ ಚಿತ್ರಕಲಾಕೃತಿಗಳನ್ನು ಸಂಕ್ಷಿಪ್ತ ವಿವರಗಳೊಂದಿಗೆ ಪ್ರದರ್ಶಿಸಲಾಗುವುದು.
ವಾಲ್ಮೀಕಿ ಆಶ್ರಮದ ಪ್ರತಿರೂಪವು ಒಟ್ಟು 14 ಅಡಿ ಅಗಲ ಮತ್ತು 24 ಅಡಿ ಎತ್ತರವನ್ನು ಹೊಂದಿರುತ್ತದೆ. 5 ದಿನಗಳ ಕಾಲ 13 ನುರಿತ ಕೆಲಸಗಾರರು ಮೂಲ ಫ್ಯಾಬ್ರಿಕೇಷನ್ ಅನ್ನು ತಯಾರಿಸಲಿದ್ದಾರೆ. ಈ ಪ್ರತಿರೂಪಕ್ಕೆ ಒಟ್ಟಾರೆ ಕೆಂಪು ಮತ್ತು ಹಳದಿ ಬಣ್ಣದ ಒಟ್ಟು ಒಂದು ಲಕ್ಷ ಗುಲಾಬಿ ಹೂಗಳನ್ನು ಹಾಗೂ ಶ್ವೇತ, ಪರ್ಪಲ್, ಹಳದಿ ಮತ್ತು ಚಾಕ್ಲೀಟ್ ವರ್ಣದ ಒಟ್ಟು 1.75 ಲಕ್ಷ ಆಕರ್ಷಕ ಕಲ್ಕತ್ತಾ ಮತ್ತು ಸಾಮಾನ್ಯ ಸೇವಂತಿಗೆ ಹೂಗಳನ್ನು ಬಳಸಲಾಗುವುದು. ಗುಲಾಬಿ ಮತ್ತು ಸೇವಂತಿಗೆ ಹೂಗಳು ಸೇರಿ ಒಂದು ಬಾರಿಗೆ 2.75 ಲಕ್ಷ ಹೂಗಳಂತೆ ಒಟ್ಟಾರೆ 2 ಬಾರಿಗೆ 5.5 ಲಕ್ಷ ಹೂಗಳನ್ನು ಈ ಉದ್ದೇಶಕ್ಕೆ ಬಳಸಲಾಗುವುದು. ಜೊತೆಗೆ ವಿವಿಧ ಆಕರ್ಷಕ ಫೆÇೀಲಿಯೇಜ್‍ಗಳಿರುತ್ತವೆ. ಈ ಕಾರ್ಯವನ್ನು ಮೆ: ಸ್ಟೀಲು ಪ್ಲವರ್‍ನ ಅಗರ್‍ವಾಲ್ ರವರು ಕೈಗೊಳ್ಳಲಿದ್ದಾರೆ.
ಗಾಜಿನ ಮನೆಯ ಕೇಂದ್ರಭಾಗದ ಹಿಂಬದಿಗೆ ರಾಮಾಯಣದ ಪಂಚವಟಿಯನ್ನು ಬಿಂಬಿಸುವ 3ಡಿ ಕಲಾಕೃತಿ ಹಾಗೂ ರಾಮಾಯಣದ ಸಾಂದರ್ಭಿಕ ಚಿತ್ರಕಲಾ ಕೃತಿಗಳ ಅನಾವರಣ:
ಆದಿಕವಿ ವಾಲ್ಮೀಕಿ ಮಹರ್ಷಿಗಳ ರಚನೆ ವಿಶ್ವಕಾವ್ಯ ಶ್ರೀರಾಮಾಯಣ. ಶ್ರೀರಾಮಾಯಣ ಮಹಾಕಾವ್ಯದಲ್ಲಿ ಪಂಚವಟಿಯ ಪ್ರಸ್ತಾಪ ಮತ್ತು ವರ್ಣನೆ ಬರುತ್ತದೆ. ವನವಾಸದ ಅವಧಿಯಲ್ಲಿ ಶ್ರೀರಾಮ-ಸೀತಾ- ಲಕ್ಷಣರು ಇಲ್ಲಿ ಬಹಳ ಕಾಲ ವಾಸವಾಗಿದ್ದರು. ಇಲ್ಲಿಯೇ ರಾವಣ ಸೀತೆಯನ್ನು ಅಪಹರಿಸುವ ಮೂಲಕ ತನ್ನ ಮೃತ್ಯುವನ್ನು ತಾನೇ ಆಹ್ವಾನಿಸಿಕೊಳ್ಳುವುದು. ಪಂಚವಟಿಯು ಸಮೃದ್ಧ ಅರಣ್ಯ ಪ್ರದೇಶವಾಗಿದ್ದು, ಅದನ್ನು ಬಹಳ ಸೊಗಸಾಗಿ ಮಹರ್ಷಿಗಳು ವರ್ಣಿಸಿರುತ್ತಾರೆ. ಪಂಚವಟಿ, ಅಲ್ಲಿನ ರಾಮನ ಎಲೆ ಮನೆ ಇವೆಲ್ಲವನ್ನೂ ಸಾಂಕೇತಿಕವಾಗಿ ಬಿಂಬಿಸುವ 3ಡಿ ಕಲಾಕೃತಿಯನ್ನು ಈ ಭಾಗದಲ್ಲಿ ಪ್ರದರ್ಶಿಸಲಾಗುವುದು. ಈ ಕಲಾಕೃತಿಯ ಸುತ್ತಲೂ ರಾಮಾಯಣದ ಆಯ್ದ ಪಾತ್ರಧಾರಿಗಳ ಮತ್ತು ಸನ್ನಿವೇಶಗಳ ಚಿತ್ರ ಕಲಾಕೃತಿಗಳನ್ನು ಸಂಕ್ಷಿಪ್ತ ವಿವರಗಳೊಂದಿಗೆ ಪ್ರದರ್ಶಿಸಲಾಗುವುದು. ಈ ಪರಿಕಲ್ಪನೆಯನ್ನು ಮೆಃ ಸಿನಿದಿನಿ ಕ್ರಿಯೇಷನ್ಸ್ ರವರು ಕೈಗೊಳ್ಳಲಿದ್ದಾರೆ.
ಗಾಜಿನ ಮನೆಯ ಕೇಂದ್ರಭಾಗದ ಹಿಂದಿನ ಅಂಕಣದಲ್ಲಿ ವಾಲ್ಮೀಕಿ ಪರಂಪರೆಯನ್ನು ಬಿಂಬಿಸುವ ರಾಮಾಯಣದ ನಂತರದ ಕವಿಗಳ ಕಲಾಕೃತಿಗಳು:
ಶ್ರೀರಾಮಾಯಣವು ಆದಿಕವಿ ವಾಲ್ಮೀಕಿಗಳಿಂದ ರಚಿತವಾಯಿತು. ಅದು ಕಾಲ ದೇಶಗಳನ್ನು ಮೀರಿ ಯಶಸ್ಸನ್ನು ಪಡೆದು ಆದಿಕಾವ್ಯ ಎಂದೇ ಜನಪ್ರಿಯವಾಯಿತು. ನಂತರದಲ್ಲಿ ಕಾಲಕಾಲಕ್ಕೆ ಹಲವಾರು ಋಷಿ ಕವಿಗಳಿಂದ ಅದು ಪುನರ್ ರಚಿತವಾಗುತ್ತಲೇ ಇದೆ. ಇಂತಹ ಸಾವಿರಾರು ರಾಮಾಯಣಗಳು ಇಂದು ಜಗತ್ತಿನಾದ್ಯಂತ ಲಭ್ಯವಿವೆ. ಈ ವಾಲ್ಮೀಕಿ ಪರಂಪರೆಯನ್ನು ಸಾಂಕೇತಿಕವಾಗಿ ಬಿಂಬಿಸುವ ಉದ್ದೇಶದಿಂದ ಆಯ್ದ ಮಹತ್ವದ ರಾಮಾಯಣದ ಕವಿಗಳ ಎದೆಮಟ್ಟದ ಶಿಲ್ಪಗಳನ್ನು ಅವರ ಕಾವ್ಯದ ವಿವರಗಳೊಂದಿಗೆ ಆಕರ್ಷಕ ಹೂ ಜೋಡಣೆಯ ನಡುವೆ ಪ್ರದರ್ಶಿಸಲಾಗುವುದು. ಈ ಭಾಗದಲ್ಲಿ ಆದಿಕವಿ ವಾಲ್ಮೀಕಿ, ಕನ್ನಡದ ನಾಗಚಂದ್ರ, ಕುಮುದೇಂದು, ತೊರವೆ ರಾಮಾಯಣ, ಕುವೆಂಪು, ತಮಿಳಿನ ಕಂಬರ್, ತೆಲುಗಿನ ಗೊನ್ನಬುದ್ದರೆಡ್ಡಿ, ಹಿಂದಿಯ ತುಲಸೀದಾಸ, ಅವರ ಮಲಯಾಳಂನ 'ಆಧ್ಯಾತ್ಮ ರಾಮಾಯಣಂ ಕಿಳಿಪ್ಪಟ್ಟು' ಪ್ರತಿಮೆಗಳಿರಲಿವೆ. ಇನ್ನುಳಿದಂತೆ ಇತರ ರಾಮಾಯಣ ಮತ್ತು ರಾಮಾಯಣದ ಕವಿ ಪರಂಪರೆಯನ್ನು ವಿವರವಾಗಿ ಗಾಜಿನ ಮನೆಯ ಒಳಗೋಡೆಗಳಲ್ಲಿ ಪ್ರದರ್ಶಿಸುವ ಮಾಹಿತಿ ಫಲಕಗಳಲ್ಲಿ ನೀಡಲಾಗುವುದು.
ಗಾಜಿನ ಮನೆಯ ಕೇಂದ್ರಭಾಗದ ಬಲಬದಿಯ ಅಂಕಣದಲ್ಲಿ ವಿಶೇಷ ಕುಠೀರ ವಿನ್ಯಾಸದ ವರ್ಟಿಕಲ್ ಗಾರ್ಡನ್ ಮಾದರಿ ಮತ್ತು ವಾಲ್ಮೀಕಿ ರಾಮಾಯಣ ಕಲಾಕೃತಿಗಳು:
ಗಾಜಿನ ಮನೆಯ ಕೇಂದ್ರಭಾಗದ ಬಲಬದಿಗೆ ಇರುವ ಅಂಕಣದಲ್ಲಿ ವಿಶೇಷ ಕುಠೀರ ವಿನ್ಯಾಸದ ವರ್ಟಿಕಲ್ ಗಾರ್ಡನ್ ಕಲಾಕೃತಿ ಇರಲಿದೆ. ರಾಮಾಯಣದ ಕವಿಕೋಗಿಲೆ ಮಹರ್ಷಿ ವಾಲ್ಮೀಕ ಎಂಬ ಶಿರ್ಷಿಕೆಯಡಿ ಮಹರ್ಷಿ ವಾಲ್ಮೀಕಿ ರಾಮಪಟ್ಟಾಭಿμÉೀಕ ಮತ್ತು ಇತರೆ ಚಿತ್ರಕಲಾಕೃತಿಗಳೊಂದಿಗೆ ಸಂಯೋಜನೆಗೊಂಡಿರುತ್ತದೆ. ಈ ಕಲಾಕೃತಿಯ ಮುಂದೆ ವ್ಯಾಸಪೀಠದಲ್ಲಿ ಶ್ರೀರಾಮಾಯಣ ಪುಸ್ತಕ ಇರುವ ಕಲಾಕೃತಿಯು ಪ್ರದರ್ಶನಗೊಳ್ಳಲಿದೆ. ಈ ಪರಿಕಲ್ಪನೆಗೆ 12 ವಿವಿಧ ಬಗೆಯ 30,000 ಕ್ಕೂ ಹೆಚ್ಚು ಆಕರ್ಷಕ ಅಲಂಕಾರಿಕ ಗಿಡಗಳನ್ನು ಬಳಸಲಾಗುತ್ತಿದೆ. ಅವುಗಳೆಂದರೆ ಸಿಂಗೊನಿಯಂ ರೆಡ್. ಆಕ್ಸಿಕಾರ್ಡಿಯಂ ಗ್ರೀನ್ ಅಂಡ್ ಗೋಲ್ಡ್, ಮನಿ ಪ್ಲಾಂಟ್ ಗ್ರೀನ್ ಗೋಲ್ಡ್ ಅಂಡ್ ವೆರಿಗೇಟೆಡ್, ಅಂಥೋರಿಯಂ, ಸೇವಂತಿಗೆಗಳು, ಬಿಗೋನಿಯಾ, ಗುಲಾಬಿ ಗಿಡಗಳು, ಆಸ್ಪರಾಗಸ್ ಗಿಡಗಳು ಸೇರಿವೆ. ಮಂಟಪ ವಿನ್ಯಾಸದ ವರ್ಟಿಕಲ್ ಗಾರ್ಡನ್ ಮಾದರಿಯನ್ನು ಬೆಂಗಳೂರಿನ ಪ್ರತಿಷ್ಠಿತ ಮೆ. ಭಾಗ್ಯಲಕ್ಷ್ಮೀ ಫಾರಂನ ತನಿμÁ ಬೈಸಾನಿ ರವರು ಶ್ರೀರಾಮರೆಡ್ಡಿ ರವರ ಸಹಕಾರದಲ್ಲಿ ಕೈಗೊಳ್ಳಲಿದ್ದಾರೆ.
ಹನುಮ-ಜಾಂಬವಂತ-ಜಟಾಯು-ಅಳಿಲು ಕಲಾಕೃತಿಗಳ ಅನಾವರಣ:
ಗಾಜಿನ ಮನೆಯ ಮಧ್ಯ ಭಾಗದಲ್ಲಿ ಪ್ರದರ್ಶನವಾಗುವ ಬೃಹತ್ ಹುತ್ತದ ಕಲಾಕೃತಿಯ ನಾಲ್ಕು ಮೂಲೆಗಳಲ್ಲಿ ಸುಮಾರು ಮೂರು ಅಡಿ ಎತ್ತರದ ಹನುಮ, ಜಾಂಬವಂತ, ಜಟಾಯು ಮತ್ತು ಅಳಿಲು ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ವಾಲ್ಮೀಕಿ ವಿರಚಿತ ಶ್ರೀಮದ್ರಾಮಾಯಣವು ಸರ್ವಜೀವಕೇಂದ್ರಿತವಾದ ಕಾವ್ಯ ಎಂಬುದನ್ನು ಬಿಂಬಿಸುವ ಉದ್ದೇಶದಿಂದ ಈ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಹತ್ತು ಆಕರ್ಷಕ ಪುಷ್ಪ ಪಿರಮಿಡ್ಡುಗಳು ಮತ್ತು ವಾಲ್ಮೀಕಿ ಹಾಗೂ ರಾಮಾಯಣದ ಪಾತ್ರಧಾರಿಗಳ ಚಿತ್ರಗಳು:
ಗಾಜಿನ ಮನೆಯ ಒಳಾಂಗಣದ ಹತ್ತು ಮೂಲೆಗಳಲ್ಲಿ ಹತ್ತು ಆಕರ್ಷಕ ಪುಷ್ಪ ಪಿರಮಿಡ್ಡುಗಳು ಪ್ರದರ್ಶನವಾಗಲಿವೆ.
ಆಕರ್ಷಕ ವರ್ಣಗಳ ಸೇವಂತಿಗೆ, ಇಂಪೇಷನ್ಸ್, ರೆಡ್ ಸಾಲ್ವಿಯಾ, ವಿವಿಧ ವರ್ಣದ ಬಿಗೋನಿಯ, ಡಬಲ್ ಜಿನ್ನಿಯಾ ಮತ್ತು ಪಾಯಿನ್‍ಸಿಟಿಯಾ ಹೀಗೆ 6 ಪುಷ್ಪ ಪಿರಮಿಡ್‍ಗಳನ್ನು ಲಾಲ್‍ಬಾಗ್ ವತಿಯಿಂದಲೂ, ವಿವಿಧ ಆಕರ್ಷಕ ವಾರ್ಷಿಕ ಹೂಗಳ ಒಂದು ಪುಷ್ಪ ಪಿರಮಿಡ್ ಅನ್ನು ಕಬ್ಬನ್‍ಪಾರ್ಕ್ ವತಿಯಿಂದ ಕೈಗೊಳ್ಳಲಾಗುತ್ತಿದೆ. ದಿ ನರ್ಸರಿ ಮೆನ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಅಥೋರಿಯಂ, ವಿವಿಧ ವರ್ಣಗಳ ಸೇವಂತಿಗೆ ಹಾಗೂ ಆರ್ಕಿಡ್ ಹೂ ಕುಂಡಗಳಿಂದ 1 ಪುಷ್ಪ ಪಿರಮಿಡ್ ಹೊರ ಹೊಮ್ಮಲಿದೆ. ಹಾಗೆಯೇ ಒಂದು ಆಕರ್ಷಕ ಹೂವಿನ ಬೆಡ್ ಕೂಡ ರೂಪುಗೊಳ್ಳಲಿದೆ. ಶ್ರೀ ತಿರುಮಲ ಸಸ್ಯಾಗಾರದ ವತಿಯಿಂದ ಆಕರ್ಷಕ ಬಗೆಯ ಬೊಮಿಲಿಯಾಡ್ ಗಿಡಗಳಿಂದ ಕೂಡಿದ ಒಂದು ಪುಷ್ಪ ಪಿರಮಿಡ್ ಸಿಂಗಾರಗೊಳ್ಳಲಿದೆ. ಒಟ್ಟಾರೆ 10 ಪುಷ್ಪ ಪಿರಮಿಡ್‍ಗಳಿಗೆ 12 ವಿವಿಧ ಆಕರ್ಷಕವಾದ ಹೂ ಜಾತಿಗಳಿಗೆ ಸೇರಿದ ಕುಂಡಗಳನ್ನು ಬಳಸಲಾಗುವುದು, ಪುಷ್ಪ ಪಿರಮಿಡ್‍ಗಳ ಜೋಡಣೆಗೆ ಒಟ್ಟಾರೆ 15,000 ಕ್ಕೂ ಹೆಚ್ಚು ಹೂ ಕುಂಡಗಳನ್ನು ಬಳಸಲಾಗುವುದು.
ಈ ಪ್ರತಿ ಪಿರಮಿಡ್ಡುಗಳ ತುದಿಯಲ್ಲಿ ಮಹರ್ಷಿ ವಾಲ್ಮೀಕಿ, ಶ್ರೀರಾಮ - ಸೀತಾ ಮೊದಲಾದ ರಾಮಾಯಣದ ಆಯ್ದ ಪಾತ್ರಗಳ ಚಿತ್ರಕಲಾಕೃತಿಗಳನ್ನು ಸಂಯೋಜಿಸಿ ಪ್ರದರ್ಶಿಸಲಾಗುವುದು.
ಕಂಬಗಳಲ್ಲಿ ಅರಳುವ ಪುಷ್ಪ ಡೂಮ್ಸ್‍ಗಳು:
ಗಾಜಿನ ಮನೆಯ ಆಯ್ದ 40 ಕಂಬಗಳಲ್ಲಿ, ಭೂಮಟ್ಟದಿಂದ 7-8 ಅಡಿ ಎತ್ತರದಲ್ಲಿ ವಿವಿಧ ವರ್ಣಗಳ ಆಂಥೋರಿಯಂ, ಅಲ್‍ಸ್ಟೋಮೆರಿಯಾ ಲಿಲ್ಲಿ. ಲಿಲಿಯಂ, ಎಲೆಗಳು, ಪೆÇೀಡೋಕಾರ್ಪಸ್, ಅರೆಕಾ ಎಲೆಗಳು. ಸಾಂಗ್ ಆಫ್ ಇಂಡಿಯಾ, ಸೇವಂತಿಗೆ, ಕಾರ್ನೆಷನ್ಸ್, ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಾಡೈಸ್, ಹೆಲಿಕೋನಿಯಾ, ಜಿಂಜರ್ ಲಿಲ್ಲಿ. ಫೆÇೀಲಿಯೇಜ್‍ಗಳಾದ ಡ್ರಸೀನಾ, ಜನಾಡೋ ಮತ್ತು ಐವಿ ಎಲೆಗಳಿಂದ ಕೂಡಿದ ಆಕರ್ಷಕ ಹೂವಿನ ಗುಮ್ಮಟಗಳು ಗಾಜಿನ ಮನೆಯ ಅಂದವನ್ನು ಹೆಚ್ಚಿಸಲಿದೆ. ಈ ಉದ್ದೇಶಕ್ಕೆ 2 ಬಾರಿಯ ಬದಲಾವಣೆ ಸೇರಿ ಒಟ್ಟು 25.000 ಕ್ಕೂ ಹೆಚ್ಚು ಸಂಖ್ಯೆಯ ಆಕರ್ಷಕ ಹೂ ಮತ್ತು ಎಲೆಗಳನ್ನು ಬಳಸಲಾಗುವುದು. ಈ ಕಾರ್ಯವನ್ನು ಮೆ. ಗ್ರೀನ್ ಸರ್ವೀಸಸ್‍ನ ಜಗದೀಶ್ ರವರು ಕೈಗೊಳ್ಳಲಿದ್ದಾರೆ.
ಪ್ಯಾಲುಡೇರಿಯಂ ಪರಿಕಲ್ಪನೆಯ ಅನಾವರಣ:
ಗಾಜಿನ ಮನೆಯ ಪರಿಧಿಯಲ್ಲಿ ಅಕ್ಟೇರಿಯಂನಂತೆ ಗಿಡಗಳನ್ನು ಬೆಳೆಸುವ ಪ್ಯಾಲುಡೇರಿಯಂ ಪರಿಕಲ್ಪನೆಯ ಜೊತೆಗೆ ಟ್ರಾಪಿಕಲ್ ಸಸ್ಯಪ್ರಬೇಧಗಳ ಪ್ರದರ್ಶನವಿರುತ್ತದೆ.
ಗಾಜಿನ ಮನೆಯಲ್ಲಿ ವೈವಿಧ್ಯಮಯ ಪುಷ್ಪಗಳ ಪ್ರದರ್ಶನ:
ವಿವಿಧ ವಿನ್ಯಾಸಗಳ ಜೋಡಣೆಗಳಿಗೆ ಹಲವಾರು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ, ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 85ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳು ಸರ್ವರಿಗೂ ಮುದ ನೀಡಲಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ 8 ಬಗೆಯ ಸೇವಂತಿಗೆ, ಗುಲಾಬಿ, ಆರ್ಕಿಡ್ಸ್ ವಿವಿಧ ವರ್ಣದ ಪಾಯಿನ್ಸಿಟಿಯಾ, ಪೆಂಟಾಸ್‍ಕಾರ್ನಿಯಾ, ಬೋಮಿಲಿಯಾಯ್, ಟ್ಯೂಬಿರೋಸ್‍ರೋಟೆಡ್ ಬಿಗೋನಿಯಾ, ಸಿಲೋಷಿಯಾ, ಸ್ಟಾಟಿಸ್, ಪ್ಲಾಕ್ಸ್, ಸಾಲ್ವಿಯಾ, ಸೇವಂತಿಗೆ, ಹೈಡಾಂಜಿಯ, ಮೆರಿಗೋಲ್ಡ್, ಡೇಲಿಯಾ, ಜಿನ್ನಿಯಾ, ಪೆಟೂನಿಯಾ, ಕಾಸ್ಮಾಸ್, ಕ್ಲಾರ್ಕಿಯಾ, ಸೆಂಚೂರಿಯಾ, ಸ್ವಾಪ್‍ಡ್ರಾಗನ್, ಕ್ಯಾಲಾಲಿಲ್ಲಿ, ಬೋಗನ್‍ಎಲ್ಲಾ, ಮಾಂಡೊವಿಲ್ಲಾ, ನಷ್ಟೂಷಿಯಂ, ಬಾಲ್ಸ್‍ಂ. ಇಂಪೇಷನ್ಸ್, ಗ್ಯಾಸ್ಟೀನಿಯಾ ಹಿಲ್ಟಾಲ್ಸಮ್, ಜಿರೇನಿಯಂ, ಹಿಲಿಯೋಟ್ರೋಪ್ ರೂಟ್ ಬೇಕಿಯಾ, ವಿಂಕಾ, ಪೆಂಟಾಸ್‍ಕಾರಿಯಾ, ಅಕಿಮಿನಾಸ್, ಟ್ಯೂಬಿ ರೋಸ್, ಸೈಡರ್‍ಲಿಲ್ಲಿ, ಆಂಟಿರೈನಮ್, ಆ್ಯಸ್ಟರ್, ಸಿಲೋಷಿಯಾ, ವಾರ್ಷಿಕ ಸೇವಂತಿಗೆ, ಹಾಲಿಹಾಕ್, ಆಜಿರೇಟಂ, ಇತ್ಯಾದಿಗಳು ಸೇರಿವೆ. ವಿಶೇಷ ಶೀತವಲಯದ ಹೂಗಳಾದ ಸೈಕ್ಲೋಮನ್, ಅಜೇಲಿಯಾ, ಕೆಮಿಲಿಯಾ, ಇಂಪೇಷನ್ಸ್, ಪ್ರಿಮುಲ್ಲಾ, ಜೆರೆನಿಯಾ, ಪ್ಯೂಷಿಯಾ, ಅಗಪಾಂಶಸ್, ಆಲ್‍ಸೋಮೇರಿಯನ್ ಲಿಲ್ಲಿ, ರೆಡ್ ಹಾಟ್ ಪೆÇೀಕರ್ ಇತ್ಯಾದಿಗಳು ಸೇರಿವೆ. ಇವುಗಳ ಜೊತೆಗೆ ಸಕಾಟಾ ಸೀಡ್ಸ್ ಕಂಪನಿಯ ಕಟ್ ಪ್ಲಾವರ್ ಸೂರ್ಯಕಾಂತಿ ಹೂಗಳ ಪ್ರರ್ದಶನ, ಕಡಿಯಂನ ಶಿವನಂಜಯ ಸಸ್ಯಾಗಾರದ ವತಿಯಿಂದ ಡೆಲಿನಿಯಾ ಫಿಲಿಫೈನ್ಸ್, ಲೊಪಾಂಘ್ರ, ಲ್ಯಾಕ್ಟೋಸೆನ್ಸ್, ಹಳದಿ ಆರೇಂಜೆ ಗಿಡಗಳು ಹಾಗೂ ಕಂಬ್ರಾಟಮ್ ಕಾಮೋಸಂ ಆಕರ್ಷಕ ಗಿಡಗಳ ಪ್ರದರ್ಶನವಿರುತ್ತದೆ.
ಶ್ರೀರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತ ಪ್ರತಿಗಳ ಪ್ರದರ್ಶನ:
ಗಾಜಿನ ಮನೆಯ ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನವನ್ನು ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಶ್ರೀ ಬಿ.ಎಂ.ಶ್ರೀ. ಸ್ಮಾರಕ ಪ್ರತಿμÁ್ಠನದವರು ಕೈಗೊಳ್ಳಲಿದ್ದಾರೆ.
ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್:
ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನಗಳ ಸಂದರ್ಭದಲ್ಲಿ, ಜನಸಂದಣಿಯಿಂದ ಏಳುವ ಧೂಳು ಹೂಗಳನ್ನು ಮಂಕಾಗಿಸುವುದರ ಜೊತೆಗೆ, ವೀಕ್ಷಕರಿಗೂ ತೊಂದರೆ ಉಂಟು ಮಾಡುತ್ತದೆ. ವಿಶೇಷವಾಗಿ ಬಿಸಿಲಿನ ಕಾಲದಲ್ಲಿ ಹೆಚ್ಚು ಉμÁ್ಣಂಶದಿಂದಾಗಿ ಹೂಗಳು ಬಹುಬೇಗ ಬಾಡಲಾರಂಭಿಸುತ್ತವೆ. ಗಾಜಿನ ಮನೆಯ ಒಳಾಂಗಣದಲ್ಲಿ ತಂಪಾದ ವಾತಾವರಣ ಕಲ್ಪಿಸುವುದರ ಮೂಲಕ, ಗಾಜಿನ ಮನೆಗೆ ಭೇಟಿ ನೀಡುವ ವೀಕ್ಷಕರಿಗೆ ಮಂಜಿನ ವಾತಾವರಣವನ್ನು ಉಂಟು ಮಾಡುವ ವ್ಯವಸ್ಥೆ ಈ ವರ್ಷವೂ ಇರಲಿದೆ. ಇದಕ್ಕಾಗಿ ಇಸ್ರೇಲಿನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥಿತ ಮಿಸ್ಟಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಹೂ ಗಿಡಗಳು, ತರಕಾರಿ ಮತ್ತು ಔಷಧಿ ಸಸ್ಯಗಳ ಪ್ರದರ್ಶನ:
ಗಾಜಿನಮನೆಯ ಒಳಾಂಗಣ ಮತ್ತು ಒಳಾಂಗಣದ ಸುತ್ತಲೂ ಪ್ರತಿಷ್ಠಿತ ಹೆಚ್‍ಎಎಲ್ ಸಂಸ್ಥೆಯೂ ಒಳಗೊಂಡಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳ ವಿವಿಧ ಜಾತಿಯ ಕುಂಡಗಳಲ್ಲಿ ಬೆಳೆದ ಹೂವು, ತರಕಾರಿ, ಔಷಧೀಯ ಸಸ್ಯಗಳು ಮತ್ತು ಇತರೆ ಗಿಡಗಳನ್ನು ಪ್ರದರ್ಶನಕ್ಕಿಡಲಾಗುವುದು.
ಗಾಜಿನ ಮನೆಯ ಹೊರಾಂಗಣದ ವಿಶೇಷಗಳು:
ಐತಿಹಾಸಿಕ ಗಾಜಿನ ಮನೆಯು ಫಲಪುಷ್ಪ ಪ್ರದರ್ಶನದ ಮೂಲ ಕೇಂದ್ರವಾಗಿರುತ್ತದೆ. ಜನದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ, ಗಾಜಿನಮನೆಯ ಜೊತೆಗೆ, ಲಾಲ್ ಬಾಗ್ ಸಸ್ಯತೋಟದ ವಿವಿಧ ಭಾಗಗಳಲ್ಲಿಯೂ ಸಹಾ ಹಲವಾರು ಆಕರ್ಷಕ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.
ಎಲ್.ಇ.ಡಿ. ಸ್ಟೀನ್‍ಗಳನ್ನು ಬಳಸಿ ಲಾಲ್‍ಬಾಗ್ ಆಯ್ದ ಹತ್ತು ಜಾಗಗಳಲ್ಲಿ ಮಹರ್ಷಿ ವಾಲ್ಮೀಕಿ ಬದುಕು ಸಾಧನೆ ಮತ್ತು ಸಂದೇಶಗಳ ಜೊತೆಯಲ್ಲಿ ರಾಮಾಯಣದ ಮಹಾಕಾವ್ಯದ ಹೆಗ್ಗಳಿಕೆಯನ್ನು ಸಾರುವ ವಿಡಿಯೋ ತುಣುಕುಗಳು, ಚಿತ್ರಗಳು, ಫಲಪುಷ್ಪ ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿವೆ.
ಗಾಜಿನ ಮನೆಯ ಹೊರಾವರಣದ ಹುಲ್ಲುಹಾಸಿನ ನಾಲ್ಕೂ ಮೂಲೆಗಳಲ್ಲಿ ಮಹರ್ಷಿ ವಾಲ್ಮೀಕಿ, ಶ್ರೀರಾಮ-ಸೀತಾ, ಆಂಜನೇಯ ಮತ್ತು ಲವ-ಕುಶರ ನಾಲ್ಕು ಚಿತ್ರಕಲಾಕೃತಿಗಳನ್ನು ಬಿದಿರಿನ ಫೆÇೀಟೋ ಫೆÇೀಮುಗಳಲ್ಲಿ ಸಂಯೋಜಿಸಿ ಪ್ರದರ್ಶಿಸಲಾಗುವುದು.
ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ-ನವಿಲು: ರೆಡ್ ಸಾಲ್ವಿಯಾ, ಟೊರೇನಿಯಂ, ಇಂಪೇಷನ್ಸ್, ಮತ್ತು ಪೆಟೂನಿಯಾ ಹೂಕುಂಡಗಳನ್ನು ಬಳಸಲಾಗುವುದು.
ಹೃದಯಾಕಾರದ ಹೂವಿನ ಕಮಾನುಗಳು: ಆಕರ್ಷಕ ರೆಡ್ ಬೆಗೋನಿಯಾ, ಟೋರೆನಿಯಂ, ರೆಡ್ ಸಾಲ್ವಿಯಾ ಹಾಗೂ ಪೆಟೂನಿಯಾ ಹೂಕುಂಡಗಳನ್ನು ಬಳಸಲಾಗುವುದು.
ಮೆಗಾ ಪ್ಲೋರಲ್ ಪ್ಲೋ: ಸೇವಂತಿಗೆ, ಟೊರೆನಿಯಂ, ಜಿನ್ನಿಯ, ಬಿಳಿ, ಹಳದಿ ಮತ್ತು ಗೋಲ್ಡನ್ ಬಣ್ಣದ ಮೆರಿಗೋಲ್ಡ್, ರೆಡ್ ಸಾಲ್ವಿಯಾ, ಟೋರೇನಿಯಂ, ಜಿನ್ನಿಯಾ ಮತ್ತು ಡೇಲಿಯಾ ಹೂಕುಂಡಗಳಿಂದ ಅಲಂಕರಿಸಲಾಗುವುದು
ತೂಗುವ ಹೂಗಳ ಬಾಗುವ ಚೆಲುವು: ಗಾಜಿನಮನೆಯ ಹೊರಾಂಗಣದ ಹಚ್ಚ ಹಸಿರು ಹುಲ್ಲುಹಾಸಿನ ಪರಿಸರದಲ್ಲಿ ಅಳವಡಿಸಲಾಗಿರುವ ಬೃಹತ್ ಹ್ಯಾಂಗಿಂಗ್ ಸ್ಟ್ಯಾಂಡ್ಸ್ ಗಳಲ್ಲಿ ಬೇಬಿ ಜಿನ್ನಿಯಾ ಮತ್ತು ವರ್ಣಮಯ ಪೆಟೂನಿಯಾ ಹಾಗೂ ಹಿಲ್‍ಬಾಲ್ಸಮ್ಸ್ ಹೂಗಳಿಂದ ಕೂಡಿದ 145 ಹ್ಯಾಂಗಿಂಗ್ ಹೂ ಕುಂಡಗಳ ಸೌಂದರ್ಯ ಸರ್ವರನ್ನು ಆಕರ್ಷಿಸಲಿವೆ. ಲಾಲ್‍ಬಾಗ್‍ನ 4 ಪ್ರವೇಶ ದ್ವಾರಗಳ ಬಳಿ ವರ್ಟಿಕಲ್ ಗಾರ್ಡನ್‍ನಿಂದ ರೂಪಿತವಾಗುವ ಸ್ವಾಗತ ಕಮಾನುಗಳು ಇರಲಿವೆ.
ಸಸ್ಯ ಸಂತೆ: ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಸಸ್ಯ ಪ್ರೇಮಿಗಳಿಗಾಗಿ, 125 ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಲ್ಲಿ ಸಸ್ಯಸಂತೆ ಜರುಗಲಿದೆ. ತೋಟಗಾರಿಕೆ ಆಸಕ್ತರು ಒಂದೇ ವೇದಿಕೆಯಡಿ ಬೀಜ, ಗಿಡಗಳು, ಗೊಬ್ಬರ, ಸಲಕರಣೆ, ತಾಂತ್ರಿಕ ಮಾಹಿತಿ, ಇತ್ಯಾದಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ವೇದಿಕೆಯಾಗಲಿದೆ.
ಲಾಲ್‍ಬಾಗ್ ತರಬೇತಿ ಕೇಂದ್ರದ ವಿವಿಧ ಪ್ರದರ್ಶಿಕೆಗಳ ಪ್ರದರ್ಶನ: ಲಾಲ್‍ಬಾಗ್‍ನ ತರಬೇತಿ ಕೇಂದ್ರದ ವತಿಯಿಂದ ಉಲ್ಲಾಸ ಮತ್ತು ಆರೋಗ್ಯಕ್ಕಾಗಿ ತೋಟಗಾರಿಕೆ ಎಂಬ ಪರಿಕಲ್ಪನೆಯಡಿ ಎಲೆ ಜಾತಿ, ತರಕಾರಿ ಮತ್ತು ಹೂಕುಂಡಗಳ ಪ್ರದರ್ಶನದ ಜೊತೆಗೆ ಆಕರ್ಷಕ ಭೂದೃಶ್ಯ ಮಾದರಿಗಳಾದ ಬೃಹತ್ ಜಲಪಾತ, ಮರದ ಕುಠೀರ, ಹೈಡೋಫೆÇೀನಿಕ್ಸ್, ಕೈತೋಟ/ತಾರಸಿ ತೋಟದ ಮಾದರಿಗಳು ಇರಲಿವೆ. ಮಣ್ಣುರಹಿತ ಬೇಸಾಯ, ಪೌಷ್ಟಿಕ ಕೈತೋಟ ಮತ್ತು ಭೂದೃಶ್ಯ ಮಾದರಿಗಳನ್ನು ಬಿಂಬಿಸಲಿದ್ದಾರೆ.
ಸಸ್ಯತೋಟದ ಆಯ್ದ ಭಾಗಗಳಲ್ಲಿ ವಿಶೇಷ ವಿನ್ಯಾಸಗಳಲ್ಲಿ ಹೂಗಳ ಪ್ರದರ್ಶನವಿರುತ್ತದೆ.
ಲಾಲ್‍ಬಾಗ್ ಜಲಪಾತ ದರ್ಶನ: ಲಾಲ್‍ಬಾಗ್‍ನ ಚಿಕ್ಕಕೆರೆಯ ಬಳಿ ಇರುವ ಆಕರ್ಷಕ ಜಲಪಾತವನ್ನು ವೀಕ್ಷಕರಿಗಾಗಿ ಕೆಳಕಂಡ ಅವಧಿಯಲ್ಲಿ ಚಾಲನೆ ಮಾಡಲಾಗುತ್ತದೆ. (ಜಲಪಾತದ ಚಾಲನಾ ಅವಧಿ: ಬೆಳಿಗ್ಗೆ: 7.00 ರಿಂದ 7.20, 8.00 ರಿಂದ 8.20, 11 ರಿಂದ 11.20 ಮಧ್ಯಾಹ್ನ 12 ರಿಂದ 12.20. 1 ರಿಂದ 1.20, 2 ರಿಂದ 2.20, 3 ರಿಂದ 3.20 ಸಂಜೆ 4 ರಿಂದ 4.20. 5 ರಿಂದ5.20 ಮತ್ತು 6. ರಿಂದ 6.20)
ತೋಟಗಾರಿಕೆ ಮಾಹಿತಿ ಕೇಂದ್ರದ ಕುಟೀರ: ತೋಟಗಾರಿಕೆ ಇಲಾಖೆ ಮತ್ತು ಇಲಾಖೆಯ ಪೆÇ್ರೀತ್ಸಾಹಿತ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಸುಸ್ಥಿರ ಸಮಗ್ರ ಸಾಗುವಳಿ ಪದ್ಧತಿಗಳು (Susಣಚಿiಟಿಚಿbಟe iಟಿಣegಡಿಚಿಣeಜ ಜಿoಡಿmiಟಿg sಥಿsಣem veಡಿsioಟಿ-20) ಎಂಬ ಪರಿಕಲ್ಪನೆಯಡಿ ಉತ್ಪಾದನೆ ಮತ್ತು ಸಂರಕ್ಷಣೆಗೆ ಪೂರಕ ತಂತ್ರಜ್ಞಾನಗಳು ಎಂಬ ಉಪಶೀರ್ಷಿಕೆಯಡಿ ಸಮಗ್ರ ಸಾಗುವಳಿ ಪದ್ಧತಿಯ ಚಿತ್ರಣವನ್ನು ಬಿಂಬಿಸುವ 3ಡಿ ಮಾಡೆಲ್ ಅನ್ನು ಪ್ರದರ್ಶಿಸಲಾಗುವುದು. ಇಲಾಖಾ ಸಂಪನ್ಮೂಲ ಕೇಂದ್ರಗಳಾದ ಜೈವಿಕ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಪೆÇ್ರೀತ್ಸಾಹಿತ ರೈತ ಉತ್ಪಾದಕ ಕಂಪನಿಗಳು ಫಲಾನುಭವಿಗಳಿಂದ ಉತ್ಪನ್ನಗಳ ಮಾರಾಟವನ್ನು ಸಹಾ ವ್ಯವಸ್ಥೆಗೊಳಿಸಲಾಗಿದೆ.
ಸಸ್ಯತೋಟದ ಆಯ್ದ ಭಾಗಗಳಲ್ಲಿ ರಾರಾಜಿಸಲಿರುವ ಹೂ ಗಿಡಗಳ ಆಕರ್ಷಣೆ: ಸಸ್ಯತೋಟದ ಆಯ್ದ ಭಾಗಗಳಲ್ಲಿ ಒಟ್ಟಾರೆ 7.5 ಲಕ್ಷಕ್ಕೂ ಹೆಚ್ಚಿನ, ವಿವಿಧ ಬಣ್ಣ, ಆಕಾರದ ವಾರ್ಷಿಕ ಹೂಗಿಡಗಳನ್ನು ಬೆಳೆಸಲಾಗಿದೆ. ಅದೇ ರೀತಿ ಗಾಜಿನ ಮನೆಯಲ್ಲಿ, ಕುಂಡಗಳಲ್ಲಿ ಬೆಳೆದ 8 ಲಕ್ಷ ಹಾಗೂ ಪ್ರತ್ಯೇಕಿಸಿದ 11 ಲಕ್ಷ ಕಟ್ ಫ್ಲವರ್ಸ್ ಸೇರಿ ಒಟ್ಟಾರೆ 26.5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹೂ ಕುಂಡಗಳು ಹಾಗೂ ಪ್ರತ್ಯೇಕಿಸಿದ ಹೂಗಳನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಬಳಸಲಾಗುತ್ತಿರುವುದು ವಿಶೇಷವಾಗಿದೆ.
ವನ್ಯ ಜೀವಿಗಳ ಪ್ರತಿರೂಪದ ಪ್ರದರ್ಶನ: ಖ್ಯಾತ ಬಹುಮುಖ ಪ್ರತಿಭೆಗಳ ಕಲಾವಿದ ಶ್ರೀ ಜಾನ್ ದೇವರಾಜ್‍ರವರು ಗಾಜಿನಮನೆಯ ಹಿಂಭಾಗದ ಜಾವಾ ಫಿಗ್ ಪ್ರದೇಶದಲ್ಲಿ ಹುಲಿ, ಚಿರತೆ ಮುಂತಾದ ವನ್ಯಜೀವಿಗಳ ಪ್ರತಿಕೃತಿಗಳನ್ನು ಪ್ರದರ್ಶಿಸಿ ಚಿಣ್ಣರಿಗೆ ರಸದೌತಣ ನೀಡಲಿದ್ದಾರೆ.
Publisher: eSamudaay