ಬೆಂಗಳೂರು : ಒಡಿಸ್ಸಾದ ಭುವನೇಶ್ವರದಲ್ಲಿ ಜನವರಿ 8 ರಿಂದ 10ರ ವರೆಗೆ ಆಯೋಜಿಸಲಾದ “ಪ್ರವಾಸಿ ಭಾರತೀಯ ದಿವಸ” ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರು ಭಾಗವಹಿಸಿದ್ದರು.
ಪ್ರಪಂಚದ ನಾನಾ ದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನಿವಾಸಿ ಭಾರತೀಯರನ್ನು ಗುರುತಿಸಿ ಭಾರತದ ರಾಷ್ಟ್ರಪತಿಗಳು ನೀಡುವ ಅತ್ಯುನ್ನತ ಗೌರವವನ್ನು ನೀಡಲಾಗುತ್ತಿದ್ದು, ಈ ಬಾರಿ ಕಲಬುರಗಿ ಮೂಲದ ಸುಮಾರು 40 ವರ್ಷಗಳಿಂದ ಸೌದಿ ಅರೇಬಿಯಾ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ಸೈಯದ್ ಅನ್ವರ್ ಖುರ್ಷಿದ್ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು. ಈ ವರ್ಷದ ಪ್ರವಾಸಿ ಭಾರತೀಯ ಸಮ್ಮಾನ್ ಪಡೆದ 27 ಜನರಲ್ಲಿ ಡಾ. ಖುರ್ಷಿದ್ ಕೂಡ ಒಬ್ಬರು ಎಂದು ಅನಿವಾಸಿ ಭಾರತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: eSamudaay