ಪುತ್ತಿಗೆ ಶ್ರೀ ಗಳಿಂದ ವಿಶೇಷ ಕುಣಿತ ಭಜನೋತ್ಸವಕ್ಕೆ ಚಾಲನೆ

13 Jan, 2025

ಉಡುಪಿ: ಸಪ್ತೋತ್ಸವದ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ವಿಶೇಷ ಕುಣಿತ ಭಜನೋತ್ಸವ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.

 ರಥಬೀದಿಯ ಸುತ್ತಲೂ 26 ತಂಡಗಳಿಂದ ಕುಣಿತ ಭಜನೆಯು ಜರುಗಿತು ಹಾಗೂ ವಿಶೇಷವಾಗಿ ಪಂಚವಾದ್ಯ ಸೇವೆಯೊಂದಿಗೆ ಶ್ರೀ ಅನಂತೇಶ್ವರ ಚಂದ್ರಮೌಳೇಶ್ವರ ಹಾಗೂ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವವು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಅತ್ಯಂತ ವೈಭವದಿಂದ ನಡೆಯಿತು.

 

Publisher: eSamudaay

Powered by