ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಬಹುಮಾನ

13 Jan, 2025

ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬೆಂಗಳೂರು ಇದರ ವತಿಯಿಂದ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಏಕಪಾತ್ರಾಭಿನ ಯದಲ್ಲಿ ಸುಜ್ಞಾನ್ ಶರ್ಮ ತೃತೀಯ ಸ್ಥಾನ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಸಿಯಾ ಚೇತನ್ ಶೆಟ್ಟಿ ಪ್ರಥಮ ಸ್ಥಾನ ಹಾಗೂ ರಸಪ್ರಶ್ನೆಯಲ್ಲಿ ಅನ್ವಿತಾ ಎಸ್ ಭಟ್ ತೃತೀಯ ಸ್ಥಾನ ಪಡೆದಿರುತ್ತಾರೆ. ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ, ವಿಭಾಗ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಆಡಳಿತ ಮಂಡಳಿಯ ಅಧ್ಯಕ್ಷರಾದ  ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಗೌರವಾನ್ವಿತ ಕಾರ್ಯ ದರ್ಶಿ ಡಾ| ಪಿ.ಎಸ್. ಐತಾಳ್, ಪ್ರಾಂಶುಪಾಲರಾದ ಪ್ರತಿಮಾ ಬಾಳಿಗ,  ಸಾಂಸ್ಕೃತಿಕ  ಸ್ಪರ್ಧೆಗಳ ಸಂಯೋಜಕ ರಮಾನಂದ ರಾವ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

Publisher: eSamudaay

Powered by