ಹರಿದಾಸರ ದಿನಚರಿ –(A Day in the life of Sri Purandara Dasaru) ಸಿನಿಮಾದ ಬಗ್ಗೆ* ನಾನು ಅನುಪಮಾ ಕೋಟ ಮತ್ತು ನನ್ನ ಮಗ ಚಿನ್ಮಯ ಅಡಿಗ, 28 ಡಿಸೆಂಬರ್ 2024ನ್ನು ಹರಿದಾಸರ ದಿನಚರಿಯೊಂದಿಗೆ ಆರಂಭಿಸಿದವು. ಬೆಂಗಳೂರು ಕೋಣನಕುಂಟೆ ಕ್ರಾಸ್ ನಲ್ಲಿ ಇರುವ ಫೋರಮ್ ಮಾಲ್ನಲ್ಲಿ “ಹರಿದಾಸರ ದಿನಚರಿ” ಸಿನಿಮಾ ಪ್ರದರ್ಶನದಲ್ಲಿತ್ತು.
ಸರಿಯಾದ ಸಮಯ ಬೆಳಗ್ಗೆ 11 ಗಂಟೆಗೆ ನಾವಲ್ಲಿಗೆ ಹೋಗಿ ಟಿಕೆಟ್ ಪಡೆದು ಕೊಂಡೆವು. ನಮ್ಮ ಅದೃಷ್ಟಕ್ಕೆ ಸಿನಿಮಾದ ನಿರ್ದೇಶಕರು ಗಿರೀಶ್ ನಾಗರಾಜ ಮತ್ತು ಇಸ್ಕಾನ್ ತಂಡವು ಅಲ್ಲಿದ್ದರು. ಸಿನಿಮಾದ ವಿಶೇಷತೆ ಬಗ್ಗೆ ಸುರುವಿಗೆಸ್ವಲ್ಪ ವಿವರಿಸಿದ್ದರು. ಜಾಸ್ತಿ ಹಿರಿಯರು ಸಿನಿಮಾ ನೋಡಲು ಬಂದಿದ್ದರು. ಸಿನಿಮಾ ವನ್ನು ಅತ್ಯಂತ ಮೌನದಿಂದ ಎಲ್ಲರೂ ನೋಡುತ್ತಿದ್ದರು. ಶ್ರೀಯುತ ಡಾ||ವಿದ್ಯಾಭೂಷಣ ಅವರ ನಟನೆ ನೈಜ್ಯವಾಗಿತ್ತು.
ಪುರಂದರದಾಸರ ದಿನ ಬೆಳಗ್ಗೆ ಮೂರರಿಂದ ರಾತ್ರಿ ಸುಮಾರು 11 ರವರೆಗೆ ಹೇಗೆ ನಡೆ ಯುತ್ತದೆ ಎನ್ನುವುದೇ ಸಿನಿಮಾದ ವಿಷಯವಾಗಿತ್ತು. ಸ್ವಲ್ಪ ನಿಧಾನವಾಗಿ ಚಲಿಸಿದರೂ ಎಲ್ಲಿಯೂ ಯಾವ ರೀತಿಯೂ ಲೋಪದೋಷ ಬರೆದ ಹಾಗೆ ನಿರ್ದೇಶಕರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಪುರಂದರ ದಾಸರು ಅನೇಕ ಕಥೆಗಳ ಸಾರಾಂಶವನ್ನು ಹೇಳಿದ್ದಾರೆ ಮತ್ತು ಪ್ರಮುಖವಾದ ದಾಸನಾಮಗಳ ಕೀರ್ತನೆಗಳನ್ನು ವಿದ್ಯಾಭೂಷಣರು ಪುರಂದರದಾಸರಾಗಿ ರಸವತ್ತಾಗಿ ಹಾಡಿದ್ದಾರೆ.
ಕೊನೆಯಲ್ಲಿ ಬರುವ “ಜಗದೋದ್ಧಾರನ ಆಡಿಸಿದಳೆ ಯಶೋದೆ” ಚಿತ್ರೀಕರಣ ದಲ್ಲಿ ಸಾಕ್ಷಾತ್ ಯಶೋದೆ ಮತ್ತು ಬಾಲಕೃಷ್ಣರು ಧರೆಗೆ ಇಳಿದು ಬಂದ ಹಾಗೆ ಇತ್ತು. ಈ ಚಿತ್ರದಲ್ಲಿ ಪುರಂದರದಾಸರು ತುಳಸಿಯ ಮಹತ್ವ, ಕನಕದಾಸರ ಬಗ್ಗೆ , ಕೊನೆಗಳಿಗೆ ಸಾವಿನ ಸಮೀಪದಲ್ಲಿ ಮೋಹವನ್ನು ಬಿಟ್ಟು ಶ್ರೀ ಕೃಷ್ಣನನ್ನು ಆಲಿಂಗಿಸ ಬೇಕು (ನನಗೆ ತುಂಬಾ ನಾಟಿದ ವಿಚಾರ*) ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಸ್ಪಷ್ಟಸಿದ್ದಾರೆ. ನಿರ್ದೇಶಕರು, ಪುರಂದರದಾಸರು ನವಕೋಟಿ ನಾರಾಯಣದ ಬೆಲೆ ಆಗಿನ ಕಾಲದಲ್ಲಿ ಎಷ್ಟಿತ್ತು ಮತ್ತು ಈಗಿನ ಕಾಲದಲ್ಲಿ ಎಷ್ಟಿದೆ ಎಂಬುದನ್ನು ಸಾರಿದರು.
ಸಿನಿಮಾ ಮುಗಿದ ನಂತರ ತನ್ನ ಮುಂದಿನ ಪ್ರಾಜೆಕ್ಟ್ “ಬನ್ನಂಜೆ ಗೋವಿಂದಾಚಾರ್ಯರು ಬರೆದ ರಾಮಾಯಣದಲ್ಲಿರುವ ವ್ಯಕ್ತಿತ್ವ”, ಬಗ್ಗೆ ಎಂದು ತಿಳಿಸಿದರು. ಉಡುಪಿಯವಳಾದ ನನಗೆ ಈ ವಿಚಾರ ಕೇಳಿ ತುಂಬಾ ಖುಷಿಯಾಯಿತು. ನಂತರ ಎಲ್ಲರೂ ಸೇರಿ ಇಸ್ಕಾನ್ ಪ್ರಭುಗಳೊಂದಿಗೆ ಗುಂಪಿನ ಛಾಯಾಚಿತ್ರ ಮತ್ತು ನಾನು ನಿರ್ದೇಶಕರೊಂದಿಗೆ ಫೋಟೋ ಗಳನ್ನು ತೆಗೆದುಕೊಂಡು ಸಂತೋಷದಿಂದ ಹೊರಗೆ ಬಂದೆವು. ಎಲ್ಲರೂ ಒಮ್ಮೆಯಾದರೂ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ ಬದುಕಿನ ಸಾರ್ಥಕತೆಯನ್ನು ಭಕ್ತಿ ಮಾರ್ಗದಲ್ಲಿ ಪಡೆಯಬೇಕು.
Publisher: eSamudaay