ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಮಾದರಿಗಳ ಪರಿಶೀಲನೆ

08 Jan, 2025

 

ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಸಾರ್ವಜನಿಕರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಅಂಶಗಳನ್ನು ಖಾತರಿಪಡಿಸುವ ಮತ್ತು ಆ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ನವೆಂಬರ್ ಮತ್ತು ಡಿಸೆಂಬರ್-2024ರ ಮಾಹೆಗಳಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಿ ಅಗತ್ಯ ಕ್ರಮಗಳನ್ನು ಜರುಗಿಸಿದೆ.

ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಿಗೆ ಭೇಟಿ :
2024ನೇ ಅಕ್ಟೋಬರ್ ಮಾಹೆಯ ಕೊನೆಯ ವಾರ ಹಾಗೂ ನವೆಂಬರ್ ಮಾಹೆಯಲ್ಲಿ ಹಿಂದುಳಿದ ವರ್ಗಗಳ 629 ಹಾಸ್ಟೆಲ್‍ಗಳಿಗೆ ಪರಿಶೀಲನಾ ಭೇಟಿ ನೀಡಿ 1378 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 1280 ಮಾದರಿಗಳು ಸುರಕ್ಷಿತ ಎಂದು, 42 ಮಾದರಿಗಳು ಅಸುರಕ್ಷಿತ ಎಂದು, 56 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದಾಗಿ ವರದಿಯಾಗಿರುತ್ತವೆ.

ಇಂದಿರಾ ಕ್ಯಾಂಟಿನ್‍ಗಳಿಗೆ ಭೇಟಿ :

2024ನೇ ನವೆಂಬರ್ ಮಾಹೆಯಲ್ಲಿ ನೈರ್ಮಲ್ಯತೆ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುತ್ತಿರುವ ಕುರಿತಂತೆ 188 ಇಂದಿರಾ ಕ್ಯಾಂಟೀನ್‍ಗಳಿಗೆ ಪರಿಶೀಲನಾ ಭೇಟಿ ನೀಡಿ 212 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು ಅವುಗಳಲ್ಲಿ 191 ಮಾದರಿಗಳು ಸುರಕ್ಷಿತ  ಎಂದು 04 ಮಾದರಿಗಳು ಅಸುರಕ್ಷಿತ ಎಂದು, 13 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದಾಗಿ ವರದಿಯಾಗಿರುತ್ತವೆ.
 
PG (Paying Guest) ಗಳಿಗೆ ಭೇಟಿ :
2024ನೇ ನವೆಂಬರ್ ಮಾಹೆಯಲ್ಲಿ PG (Paying Guest)) ಗಳಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿರುವ ಹಾಗೂ ನೈರ್ಮಲ್ಯದ ಕೊರತೆಯ ಕುರಿತು ವ್ಯಾಪಕವಾಗಿ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ 341 ಪಿ.ಜಿ ಗಳಿಗೆ ಪರಿಶೀಲನಾ ಭೇಟಿ ನೀಡಿ,  65 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ವೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 54 ಮಾದರಿಗಳು ಸುರಕ್ಷಿತ ಎಂದು 01 ಮಾದರಿಯು ಅಸುರಕ್ಷಿತ ಎಂದು, 02 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದಾಗಿ ವರದಿಯಾಗಿರುತ್ತವೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಿಗೆ ಭೇಟಿ :
2024ನೇ ನವೆಂಬರ್ ಮಾಹೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 331 ಹಾಸ್ಟೆಲ್‍ಗಳಿಗೆ ಪರಿಶೀಲನಾ ಭೇಟಿ ನೀಡಿ 244 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು ಅವುಗಳಲ್ಲಿ 234 ಮಾದರಿಗಳು ಸುರಕ್ಷಿತ ಎಂದು, 05 ಮಾದರಿಗಳು ಆಸುರಕ್ಷಿತ ಮತ್ತು 05 ಮಾದರಿಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದಾಗಿ ವರದಿಯಾಗಿರುತ್ತವೆ.

2024ನೇ ಡಿಸೆಂಬರ್ ಮಾಹೆಯಲ್ಲಿ ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಕ್‍ಗಳು ಮಾರಾಟವಾಗುವ ಹಿನ್ನೆಲೆಯಲ್ಲಿ ಅವುಗಳ ಗುಣಮಟ್ಟ ಪರಿಶೀಲಿಸುವ ಸಂಬಂಧ 438 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 156 ಮಾದರಿಗಳ ವಿಶ್ಲೇಷಣಾ ಕಾರ್ಯವು ಮುಕ್ತಾಯಗೊಂಡಿದ್ದು, 155 ಮಾದರಿಗಳು ಸುರಕ್ಷಿತ, 02 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿಕ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.

ಪರಿಶೀಲನಾ ಭೇಟಿಯ ಸಂದರ್ಭದಲ್ಲಿ ನೈರ್ಮಲ್ಯತೆ ಮತ್ತು ಶುಚಿತ್ವಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದ ಆಹಾರ ಉದ್ದಿಮೆಗಳಿಗೆ ನೋಟಿಸ್‍ನ್ನು ಜಾರಿಗೊಳಿಸಲಾಗಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: eSamudaay

Powered by