ಸಹ್ಯಾದ್ರಿ ಸಂಘದ 21ನೆಯ ವಾರ್ಷಿಕ ಕ್ರೀಡಾಕೂಟ ಭಾನುವಾರ ಸುಂಕದ ಕಟ್ಟೆಯಲ್ಲಿ

03 Jan, 2025

 

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿರ ಪ್ರಾತಿನಿಧಿಕ ಸಂಸ್ಥೆ ‘ಸಹ್ಯಾದ್ರಿ ಸಂಘ’ವು ಜನವರಿ 5ರ ಭಾನುವಾರ ಬೆಳಿಗ್ಗೆ 10ರಿಂದ  21ನೆಯ ವಾರ್ಷಿಕ ಕ್ರೀಡಾಕೂಟವನ್ನು ಸುಂಕದ ಕಟ್ಟೆಯ ಒಕ್ಕಲಿಗರ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ. ಐದು ವರ್ಷದಿಂದ ಅರವತ್ತೈದು ವರ್ಷದವರೆಗಿನ ಮಲೆನಾಡಿಗರು  ಈ ಸ್ಪರ್ಧೆಗಳಲ್ಲಿ ಭಾಗವಹಿಸ ಬಹುದಾಗಿದ್ದು ಕಬ್ಬಡ್ಡಿ, ವಾಲಿಬಾಲ್ ಥ್ರೋಬಾಲ್ ಗಳ ತಂಡ ಸ್ಪರ್ಧೆ ಕೂಡ ಇರುತ್ತದೆ. ಮಲೆನಾಡಿಗರಿಗಾಗಿಯೇ ಕೆಲವು ವಿಶೇಷ ಸ್ಪರ್ಧೆಗಳೂ ಕೂಡ ಏರ್ಪಾಟಾಗಿವೆ. 

ಸಂಜೆ 6ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸೈಬರ್ ಕ್ರೈಂ ವಿಭಾಗದ ಸೂಪರಿಡೆಟೆಂಟ್ ಆಫ್ ಪೋಲೀಸ್ ಎಂ.ಡಿ.ಶರತ್, ಖ್ಯಾತ ಚಿತ್ರನಟಿ ಅಂಕಿತಾ ಅಮರ್, ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲೆಯ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್, ಚಿಕ್ಕಮಗಳೂರು ಜಿಲ್ಲೆ ನಿರ್ದೇಶಕರಾದ ಪೂರ್ಣೇಶ್, ಅಧ್ಯಾತ್ಮಿಕ ಚಿಂತಕರಾದ ಡಾ.ಸುಬ್ರಹ್ಮಣ್ಯ ಉಡುಪ ಭಾಗವಹಿಸಿಲಿದ್ದಾರೆ. ಮಲೆನಾಡಿನವರೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸ ಬೇಕೆಂದು ಸಂಘದ ಗೌರವಾಧ್ಯಕ್ಷರಾದ ಜಿ.ಎ.ಪುರುಷೋತ್ತಮ ಗೌಡ ಮತ್ತು ಕಾರ್ಯದರ್ಶಿ ಎಚ್.ಸಿ.ಜಯಪ್ರಕಾಶ್  ವಿನಂತಿಸಿ ಕೊಂಡಿದ್ದಾರೆ. 

 

Publisher: eSamudaay

Powered by