ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ದಾಖಲೆಯ 38,80,881 ಪ್ರಕರಣಗಳ ಇತ್ಯರ್ಥ - ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್

20 Dec, 2024

 

ಬೆಂಗಳೂರು:  ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿನ 38,80,881 ಪ್ರಕರಣಗಳು ಇತ್ಯರ್ಥಗೊಂಡಿದ್ದು ಇದರ ಒಟ್ಟು ಪರಿಹಾರದ ಮೊತ್ತ 2248 ಕೋಟಿಯಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ತಿಳಿಸಿದರು.

ಅವರು ಡಿಸೆಂಬರ್ 18 ರಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಮಾತನಾಡುತ್ತಾ, ದಂಪತಿಗಳ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಒಟ್ಟು 1581 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸದರಿ ಪ್ರಕರಣಗಳಲ್ಲಿ ಸುಮಾರು 307 ದಂಪತಿಗಳು ರಾಜಿ ಸಂಧಾನದಿಂದ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಿರುತ್ತಾರೆ ಎಂದು ಹೇಳಿದರು.

Partition Suits (ವಿಭಾಗ ದಾವೆ) ಗೆ ಸಂಬಂಧಿಸಿದಂತೆ ಒಟ್ಟು 3311 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳಿಗೆ ಸಂಬಂಧಿತ ಒಟ್ಟು 5168 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ.260 ಕೋಟಿಗಳಷ್ಟು ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

N.I. Act  (ಚೆಕ್ ಬೌನ್ಸ್) ಒಟ್ಟು 11,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಎಲ್.ಎ.ಸಿ. ಅಮಲ್ಜಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 597 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಎಂ.ವಿ.ಸಿ. ಅಮಲ್ಜಾರಿಯ ಒಟ್ಟು 1004 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 82 ಕೋಟಿಗಳನ್ನು ಪರಿಹಾರ ಮೊತ್ತವಾಗಿ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಇತರೆ ಅಮಲ್ಜಾರಿಯ ಒಟ್ಟು 3432 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 132 ಕೋಟಿಗಳನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿರುತ್ತದೆ ಎಂದು ಹೇಳಿದರು.

ಗ್ರಾಹಕರ ವ್ಯಾಜ್ಯಗಳ ಒಟ್ಟು 611 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 3 ಕೋಟಿ 53 ಲಕ್ಷಗಳನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿರುತ್ತದೆ. ರೇರಾಗೆ ಸಂಬಂಧಿಸಿದ ಒಟ್ಟು 82 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು ರೂ. 5 ಕೋಟಿ 28 ಲಕ್ಷ ಇತ್ಯರ್ಥಗೊಂಡಿರುತ್ತದೆ ಎಂದರು.

ಈ ರಾಷ್ಟ್ರೀಯ ಲೋಕ್ ಆದಾಲತ್‍ನ ಇನ್ನೊಂದು ವಿಶೇಷವೆಂದರೆ ಹಿರಿಯ ನಾಗರಿಕರು 1921 ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಲೋಕ್ ಅದಾಲತ್‍ನ ಪ್ರಯೋಜನ ಪಡೆದಿರುತ್ತಾರೆ.

ಈ ಬಾರಿಯ ರಾಷ್ಟ್ರೀಯ ಲೋಕ್ ಆದಾಲತ್‍ನ ವಿಶೇಷ ಪ್ರಕರಣಗಳ ವಿಲೇವಾರಿ :

ಗೌರವಾನ್ವಿತ ಉಚ್ಛ ನ್ಯಾಯಾಲಯ, ಬೆಂಗಳೂರು ಪೀಠದಲ್ಲಿ ಎಂ.ಎಫ್.ಎ. ನಂ. 2068/2024. ಶಿವಣ್ಣ ವಿರುದ್ಧ ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಪ್ರಕರಣವು ರೂ. 88,00,000/- ಲಕ್ಷಕ್ಕೆ (ಎಂ.ವಿ.ಸಿ. ಸಂಖ್ಯೆ 1807/2022 ಪ್ರಕರಣದಲ್ಲಿ ಘೋಷಿಸಿರುವ ಪರಿಹಾರ ಮೊತ್ತ ರೂ. 21,26,000/-) ಗೌರವಾನ್ವಿತ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್, ನ್ಯಾಯಮೂರ್ತಿಗಳು, ಉಚ್ಚ ನ್ಯಾಯಾಲಯ ರವರ ಪೀಠದ ಮುಂದೆ ಇತ್ಯರ್ಥವಾಗಿರುತ್ತದೆ.

ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯದಲ್ಲಿನ (ಸಿಸಿಹೆಚ್ -83) Com.A.P. No. 74/2022, ಶ್ರೀ ಶ್ರೀನಿವಾಸ ಎ.ಎಸ್. ವಿರುದ್ಧ ಮೇ. ಕಾಂಡಿಡ್ ಬಿಲ್ಡರ್ಸ್ ಪ್ರೈ.ಲಿ., ಪ್ರಕರಣವು ರೂ. 23,70,00,000/- (ಇಪ್ಪತ್ತೂರು ಕೋಟಿ ಎಪ್ಪತ್ತು ಲಕ್ಷಗಳು) ಇತ್ಯರ್ಥವಾಗಿರುತ್ತದೆ.

ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ-34) ನ್ಯಾಯಾಲಯದಲ್ಲಿನ ಸಿ.ಸಿ. ನಂ. 54618/2022, ಅಕ್ಸಿಸ್ ಬ್ಯಾಂಕ್ ವಿರುದ್ಧ ಎಲ್. ಜಯರಾಮ್, ಚೆಕ್ ಬೌನ್ಸ್ ಪ್ರಕರಣವನ್ನು ರೂ. 19,87,00,000/- (ರೂ. ಹತ್ತೊಂಬತ್ತು ಕೋಟಿ ಎಂಬತ್ತೇಳು ಲಕ್ಷಗಳು) ಗಳಿಗೆ ಇತ್ಯರ್ಥಪಡಿಸಲಾಗಿರುತ್ತದೆ.

ಕೋಲಾರ ಜಿಲ್ಲೆಯ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ನಿರ್ದಿಷ್ಟ ಕರಾರು ಪಾಲನೆಯ ಪ್ರಕರಣ ಸಂಖ್ಯೆ 409/2023. ಕಳವಗುಂಟ ಜಗನ್ಮೋಹನ್ ವಿರುದ್ಧ ಎಸ್.ವಿ. ಡೆವೆಲಪರ್, ಪ್ರಕರಣವನ್ನು ತಾಜಿ ಮೂಲಕ ರೂ. 1,00,00,000/- (ರೂ. ಒಂದು ಕೋಟಿ) ಗಳಿಗೆ ಇತ್ಯರ್ಥಪಡಿಸಲಾಯಿತು.

ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 2,259 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 261 ಪ್ರಕರಣಗಳು ಹಾಗೂ 15 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 68 ಪ್ರಕರಣಗಳು ಒಟ್ಟು 2,588 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.

ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೆÇೀಷಕರಾದ ನ್ಯಾ ಎನ್.ವಿ.ಅಂಜಾರಿಯಾ ರವರ ಸೂಕ್ತ ಮಾರ್ಗದರ್ಶನದಲ್ಲಿ ಸದರಿ ಲೋಕ್ ಅದಾಲತ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದರು.

ರಾಷ್ಟ್ರೀಯ ಲೋಕ್ ಆದಾಲತ್‍ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಪೂರ್ಣ ಸಹಕಾರ ನೀಡಿರುವ ನ್ಯಾಯಾಂಗ ಅಧಿಕಾರಿಗಳು, ವಕೀಲರು. ಕಕ್ಷಿದಾರರು. ವಿಮಾ ಕಂಪನಿಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳಿಗೆ, ಕಕ್ಷಿದಾರರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಮಾಧ್ಯಮಗಳ ಸಹಕಾರ ಅತ್ಯವಶ್ಯಕ :

ಸಾರ್ವಜನಿಕರು / ಕಕ್ಷಿದಾರರ ಹೆಚ್ಚಿನ ಅನುಕೂಲಕ್ಕಾಗಿ ಲೋಕ್ ಅದಾಲತ್‍ನ ಪ್ರಯೋಜನವನ್ನು ಜನಪ್ರಿಯಗೊಳಿಸುವುದು ಅತೀ ಅವಶ್ಯಕವಾಗಿದ್ದು, ಮಾಧ್ಯಮ ಮಿತ್ರರು ಲೋಕ್ ಆದಾಲತ್‍ಗಳ ಪ್ರಯೋಜನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ, ಇನ್ನೂ ಅನೇಕ ಕಕ್ಷಿದಾರರಿಗೆ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

ಮುಂದುವರೆದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ 2025 ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ್ ಆದಾಲತ್ ನ್ನು 08.03.2025 ರಂದು ನಿಗಧಿಪಡಿಸಲಾಗಿದ್ದು, ಸಾರ್ವಜನಿಕರು ಮತ್ತು ಕಕ್ಷಿದಾರರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

Publisher: eSamudaay

Powered by