ಇಕೋಸೊಫಿ, ಏಸ್ಥೆಟಿಕ್ಸ್, ಪೀಸ್ ಮತ್ತು ಮೀಡಿಯಾ ಕುರಿತಾದ ಅಂತರರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ವಿವಿಧ ಭಾಷಣಕಾರರು ಸೌಂದರ್ಯಶಾಸ್ತ್ರ, ತಂತ್ರಜ್ಞಾನ, ಅರ್ಥಶಾಸ್ತ್ರ ಮತ್ತು ಮಾಧ್ಯಮಕ್ಕೆ ನೈತಿಕ ಮಾರ್ಗವಿರಬೇಕು ಎಂದು ವಾದಿಸಿದರು. ಸೌಂದರ್ಯಶಾಸ್ತ್ರವನ್ನು ನೈತಿಕತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ನುಡಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ತನ್ನ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆಯ ಉಪಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್, ಅಪೋಲೋ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿನೋದ್ ಭಟ್ ಅವರು ಸಂಘರ್ಷ ಮತ್ತು ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಗಾಂಧಿ ತತ್ವವು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಸಿಪಿಎಎಸ್ ನ ಹತ್ತು ವರ್ಷಗಳ ಪ್ರಯಾಣದಲ್ಲಿ ಶಿಕ್ಷಣಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಶ್ಲಾಘಿಸಿದರು. ಲಿಬರಲ್ ಆರ್ಟ್ಸ್ ಮತ್ತು ಸೋಶಿಯಲ್ ಸೈನ್ಸಸ್ ಕ್ಷೇತ್ರದದಲ್ಲಿ ವಿವಿಧ ಜ್ಞಾನಶಾಖೆಯನ್ನು ಬೆಸೆಯುವ ಸಂಸ್ಥೆಯ ವಿಭಿನ್ನತೆಯನ್ನು ವಿಶೇಷವಾಗಿ ಒತ್ತಿಹೇಳಿದರು.
ಪ್ರೊ.ಮನು ಚಕ್ರವರ್ತಿ, ಮಹೇಶ್ ದತ್ತಾನಿ, ಪ್ರೊ.ಬುರೋಶಿವ ದಾಸ್‌ಗುಪ್ತ, ಪ್ರೊ.ಗುರ್ಬುಜ್ ಅಕ್ತಾಸ್, ಪ್ರೊ.ಬಾಷಬಿ ಫ್ರೇಸರ್, ಪ್ರೊ.ಫಣಿರಾಜ್, ಪ್ರೊ.ರಾಜಾರಾಂ ತೋಳ್ಪಾಡಿ, ಪ್ರೊ.ಶ್ರೀಕುಮಾರ್, ಪ್ರೊ.ವರದೇಶ್ ಹಿರೇಗಂಗೆ ಇಕೋಸೊಫಿ, ಏಸ್ಥೆಟಿಕ್ಸ್, ಪೀಸ್ ಮತ್ತು ಮೀಡಿಯಾದ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಡಾ.ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಮರುದಿನ ನಡೆದ ಅಲುಮ್ನಿ ದಿನಾಚರಣೆಯಲ್ಲಿ ಮಾಹೆ ಅಲುಮ್ನಿ ನಿರ್ದೇಶಕ ಡಾ.ರೋಹಿತ್ ಸಿಂಗ್ ಮತ್ತು ಎಲ್ಲ ಹಿಂದಿನ ವಿದ್ಯಾರ್ಥಿಗಳು ಅತಿಥಿಗಳಾಗಿದ್ದರು.
Publisher: eSamudaay