ಉಡುಪಿ, : ಗೋವಾದ ಕೊಂಕಣ ರೈಲ್ವೆ ಕನ್ನಡ ಅಭಿಮಾನಿ ಬಳಗ ದಿಂದ ಗೋವಾದ ಮಡಗಾಂನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಶಿಕ್ಷಣ, ಜಾನಪದ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಖ್ಯಾತ ಜಾನಪದ ವಿದ್ವಾಂಸ, ಚಿಂತಕ, ಭಾರತೀಯ ರೆಡ್‌ಕ್ರಾಸ್‌ನ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.ಗೋವಾ ಕೊಂಕಣ ರೈಲ್ವೆ ಅಭಿಮಾನ ಬಳದ ಕೊಂಕಣ ರೈಲ್ವೆ ಕರ್ಮಷಿಯಲ್ ಸೂಪರ್‌ವೈಸರ್ ನಾಗಪತಿ ಹೆಗ್ಡೆ ಮತ್ತು ಬಳಗದ ಅಧ್ಯಕ್ಷ ಸುಭಾಶ್ವಂದ್ರ ಬಿ. ಶೆಟ್ಟಿ ಡಾ. ಎಕ್ಕಾರು ಅವರನ್ನು ಸನ್ಮಾನಿಸಿದರು. ಬಳಗದ ಗೌರವ ಸಲಹೆಗಾರ ದಿನೇಶ್ ಭಟ್ ಗೋಪಿ, ಕಾರ್ಯದರ್ಶಿ ರವಿಕುಮಾರ್, ಖಚಾಂಚಿ ಶ್ರೀಧರ್ ಬಳ್ಳಾರಿ ಉಪಸ್ಥಿತರಿದ್ದರು. ಬಳಿಕ ಡಾ. ಎಕ್ಕಾರು ಕನ್ನಡ ನಾಡು ನುಡಿಯ ಅನನ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
Publisher: eSamudaay