ಮಾಳ ಹರ್ಷೇಂದ್ರ ಜೈನರವರಿಗೆ "ಕನ್ನಡ ರಾಜ್ಯೋತ್ಸವ ಸೇವಾ ಪ್ರಶಸ್ತಿ 2024" ಪ್ರಶಸ್ತಿ ಪ್ರಧಾನ

03 Dec, 2024

ಉಡುಪಿ : ರಾಜಧಾನಿ ಬೆಂಗಳೂರಿನ ರಾಜ್ಯದ ಹೆಮ್ಮೆಯ ಸಂಸ್ಥೆಯಾದ ರಾಷ್ಟ್ರಕೂಟ ಗೆಳೆಯರ ಬಳಗ (ನೊಂ.) ಜಯನಗರ ಬೆಂ. ಸಂಸ್ಥೆಯವರು  ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ, ಮಹಾ ರಕ್ತದಾನಿ,ಸಮಾಜದ ಹಿತಚಿಂತಕ ಧರ್ಮ ರಕ್ಷಕ ಪರೋಪಕಾರಿ ಮಾಳ ಹರ್ಷೇಂದ್ರ ಜೈನ್ ರವರಿಗೆ ಕನ್ನಡ ರಾಜ್ಯೋತ್ಸವ ಸೇವಾ ಪ್ರಶಸ್ತಿ 2024" ಪ್ರಶಸ್ತಿ ಪ್ರಧಾನಮಾಡಳಾಯಿತು.

   ರಾಷ್ಟ್ರಕೂಟ ಗೆಳೆಯರ ಬಳಗದ ವಾರ್ಷಿಕೋತ್ಸವ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸತತ 75ನೇ ಬಾರಿ ರಕ್ತದಾನ ಮಾಡಿದ ಬೆಂಗಳೂರಿನ "ಉತ್ಸಾಹದ ಚಿಲುಮೆ ಯುವ ಮುಖಂಡ ಹಾಗೂ ಬಿಎಸ್ಎಂ ಜೈನ್ ಅಸೋಶಿಯೇಶನ್ ಇವರ ಸಾಮಾಜಿಕ-ಧಾರ್ಮಿಕ, ಶೈಕ್ಷಣಿಕ, ಹಿತ ಚಿಂತನೆ ಹಾಗೂ ಪರೋಪಕಾರಿ ಕಾರ್ಯಕ್ರಮಗಳ ಅಮೋಘ ಸೇವೆಗಾಗಿ ಅಧ್ಯಕ್ಷರಾದ ಸೋಮಶೇಖರ್ ಮಾಜಿನಗರ ಪಾಲಿಕೆ ಸದಸ್ಯರು ಹಾಗೂ ಕನಕ ಪೀಠದ ಸ್ವಾಮೀಜಿಗಳಾದ ಹಾಗೂ ಇತರ ಪರಮಪೂಜ್ಯ ಶಶಿ ಸಿದ್ದರಾಮನಂದ ಮಹಾಸ್ವಾಮೀಜಿ ಮತ್ತು ಸಾಹಿತ್ಯಿಕ ಕಲಾ ಕ್ಷೇತ್ರದ ದಿಗ್ಗಜ ಮುದ್ದುಕೃಷ್ಣ, ಶಾಸಕ ಸಿ ಕೆ ರಾಮಮೂರ್ತಿ ಹಾಗೂ ಲೋಕಾಯುಕ್ತ ಡಿ ವೈ ಎಸ್ಪಿ ರಾಜೇಶ್ ಮತ್ತು ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿದ ಅನೇಕ ಸಮಾಜ ಸೇವಕರಿಗೆ ಬಹಳ ವಿಶೇಷ ರೀತಿಯಲ್ಲಿ *ಕನ್ನಡ ರಾಜ್ಯೋತ್ಸವ ಸೇವಾ ಪ್ರಶಸ್ತಿ 2024* ಗೌರವಿಸಿ ಸನ್ಮಾನ ಪತ್ರವನ್ನು ನೀಡಲಾಯಿತು.

  ಕಾರ್ಕಳ ತಾಲೂಕಿನ ಮಾಳ ಗ್ರಾಮಗಳ ಗ್ರಾಮದ ಹೆಗ್ಗಡತಿ ಮನೆಯ ಕುಟುಂಬದಲ್ಲಿ ಬಹಳ ಬಡತನದಿಂದ ಜನಿಸಿದ ಹರ್ಷೇಂದ್ರ ರವರು ವಿದ್ಯಾರ್ಥಿ ಜೀವನದಿಂದಲೇ ಪರೋಪಕಾರ ಸಂಘಟನೆ ಮುತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದು, ತನ್ನ ವಿದ್ಯಾಭ್ಯಾಸದ ನಂತರ ದೂರದ ಬೆಂಗಳೂರಿನಲ್ಲಿ ಸುಮಾರು 4 ದಶಕಗಳಿಂದ ದೂರದ ಊರಿಂದ ಯಾವುದೇ ಸಮಾಜದ ವ್ಯಕ್ತಿಗಳು ಸಹಾಯಹಸ್ತ ಕೇಳಿದಾಗ ನಿಷ್ಕಲ್ಮಶ ಮನಸ್ಸಿನಿಂದ ಸಹಾಯ ಮಾಡುತ್ತಿದ್ದಾರೆ ಹಾಗೆಯೇ ಕನ್ನಡಪರ ಹೋರಾಟಗಳನ್ನು ಮಾಡುವುದರ ಜೊತೆಯಲ್ಲಿ, ಧರ್ಮದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಸಮಾಜಕ್ಕೆ ಧರ್ಮಕ್ಕೆ ಹಾಗೂ ವಿಶೇಷವಾಗಿ ಮುನಿಗಳ ಬಗ್ಗೆ ಯಾವುದೇ ರೀತಿಯ ಕೆಟ್ಟ ಅವಹೇಳನಕಾರಿ ಘಟನೆ ಸಂಭವಿಸಿದಾಗ ತಮ್ಮ ಸ್ನೇಹಿತರೊಡಗೂಡಿ, ತಮ್ಮ ಸಂಘದ ವತಿಯಿಂದ ಮುಂಚೂಣಿಯಲ್ಲಿ ನಿಂತು ಧರ್ಮದ ರಕ್ಷಣೆ ಮಾಡುತ್ತಿರುವ ನಮ್ಮ ಹೆಮ್ಮೆಯ ಏಕೈಕ ವ್ಯಕ್ತಿ ಹರ್ಷೇಂದ್ರ ರವರು ಹಾಗೆಯೇ ಮಹಾಮಾರಿ ಕರೋನದ ತುರ್ತು ಸಂದರ್ಭದಲ್ಲಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಕೊರೋನಾ ವಾರಿಯರ್ ಯಾಗಿ ಕೆಲಸ ಮಾಡಿದ್ದು ಬಹಳ ಶ್ಲಾಘನೀಯ ಮತ್ತು ಪ್ರಸಂಶಿನೀಯ,

ಅಂತರಾಷ್ಟ್ರೀಯ ಯೂತ್ ಐಕಾನ್ ಅವಾರ್ಡ್ , ಕರ್ನಾಟಕ ಸೇವಾ ರತ್ನ ಪ್ರಶಸ್ತಿ 2024 ,ವರ್ಲ್ಡ್ ಅಪ್ರಿಶಿಯೇಷನ್ ಪ್ರಶಸ್ತಿ, ಕೆಂಪೇಗೌಡ ಪುರಸ್ಕಾರ, ಜಿನವಾಣಿ ಪುರಸ್ಕಾರ, ಕರೋನಾ ವಾರಿಯರ್ ಪ್ರಶಸ್ತಿ ಹಾಗೂ ಸುಮಾರು 75 ಸಲ ರಕ್ತದಾನ ಮಾಡುವುದರ ಪ್ರಯುಕ್ತ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರಕಿದ್ದು ವಿಶೇಷವಾಗಿದೆ.

ಇಂದಿನ ಯುವ ಸಮಾಜಕ್ಕೆ ಮಾದರಿಯಾಗಿರುವ ತಾವು ಮುಂದಿನ ದಿನಗಳಲ್ಲಿ ಸಂಘಟನೆ ಪರೋಪಕಾರ ದಾನ-ಧರ್ಮ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇನ್ನು ಹೆಚ್ಚಿನ ಸೇವೆ ಸಲ್ಲಿಸುವಲ್ಲಿ ಶ್ರೀದೇವರ ಆಶೀರ್ವಾದವಿರಲಿ ಎಂದು ಆಶಿಸುತ್ತೇವೆ.

ವರದಿ: ಅಲೆಕ್ಸಾಂಡರ್ ಎಂಎಚ್

Publisher: eSamudaay

Powered by