ಪುಸ್ತಕ ಓದುವ ಸಂಸ್ಕೃತಿ​ ಮುಂದುವರಿಯಲಿ​ ​~ ಜಿಲ್ಲಾಧಿಕಾರಿ ​ಡಾ .ಕೆ. ವಿದ್ಯಾಕುಮಾರಿ ​

03 Dec, 2024

ಡಿಜಿಟಲ್​ ಮಾಧ್ಯಮಗಳಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದುವಾಗ ಲಭಿಸುವ ಸಂತಸ ಮೊಬೈಲ್​ ನೋಡಿ ಓದುವಾಗ ಲಭಿಸದು. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರೂ ಸಹ ಪುಸ್ತಕ ಓದುವ ಮೂಲಕ ಸಂಸ್ಕೃತಿ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು.
 ಉಡುಪಿ​ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ​ಘಟಕದ  'ಮನೆಯೇ ಗ್ರಂಥಾಲಯ' ಅಭಿಯಾನದ 125ನೇ ಕೇಂದ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲಾಡಳಿತದಲ್ಲಿ ಎಲ್ಲ ಇಲಾಖೆ ಇರುವುದರಿಂದ ಸದ್ಯ ಸ್ಥಳಾವಕಾಶದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕಾಗಿಯೇ ಒಂದು ಕೊಠಡಿ ಮೀಸಲಿಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

 

ಕನ್ನಡ ಸೇವೆಗೊಂದು ಅವಕಾಶ:​ ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ. ಸ್ವಾಗತಿಸಿ, ಪ್ರಾಸ್ತಾವಿಕ​ವಾಗಿ ಮಾತನಾಡಿ, ಘಟಕದ ಎಲ್ಲ ಉತ್ಸಾಹಿ ಪದಾಧಿಕಾರಿಗಳ ಸಹಕಾರದಲ್ಲಿ ಕನ್ನಡದ ಸೇವೆಗಾಗಿ​ ಜಿಲ್ಲಾ ಘಟಕದ ಸಹಕಾರದಿಂದ  ವಿನೂತನ ಕಾರ್ಯ​ಕ್ರಮ ಆಯೋಜಿಸುತ್ತಿದ್ದೇವೆ.​ಮಣಿಪಾಲ ರೇಡಿಯೋದಲ್ಲಿ 'ಕಥೆ ಕೇಳೋಣ' ಸರಣಿ, ಎಲ್ಲರೂ ಪುಸ್ತಕ ಓದುವಂತಾಗ​ ಬೇಕು ಎಂದು 'ಮನೆಯೇ ಗ್ರಂಥಾಲಯ' ಅಭಿಯಾನ ಕೈಗೊಂಡಿದ್ದೇವೆ. ಕನ್ನಡಕ್ಕಾಗಿ ಹಾಗೂ ಕನ್ನಡಾಂಬೆಯ ಸೇವೆಗೆ ಲಭಿಸಿದ ಅವಕಾಶದ ಸದುಪಯೋಗ ಮಾಡುತ್ತಿ​ ದ್ದೇವೆ. ಕನ್ನಡದ ಸಂಸ್ಕೃತಿ ಉಳಿಸಲು ಎಲ್ಲರೂ ಶ್ರಮಿಸೋಣ ಎಂದರು.

ಪುಸ್ತಕ ಹಸ್ತಾಂತರ​: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಡಿಸಿ ಕಚೇರಿಯ ಗ್ರಂಥಾಲಯಕ್ಕಾಗಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸಿ, ಶುಭ ಕೋರಿದರು. ಅನೇಕ ಸಾಹಿತಿಗಳು ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆ ಯಾಗಿ ನೀಡಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಪುಸ್ತಕ ಸ್ವೀಕರಿಸುವ ಮೂಲಕ 'ಮನೆಯೇ ಗ್ರಂಥಾಲಯ'ದ 125ನೇ ಕೇಂದ್ರವನ್ನು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉದ್ಘಾಟಿಸಿದರು. ​ 

ಈ ಸಂದರ್ಭ ದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ​ಸ್ಥಾಪಕ  ಉಡುಪಿ ವಿಶ್ವನಾಥ ಶೆಣೈ,​ ಉಡುಪಿ ನಗರ ಗ್ರಂಥಾಲಯದ ಮುಖ್ಯಸ್ಥೆ ನಳಿನಿ, ಕಸಾಪ ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್​, ಜಿಲ್ಲಾ ​ಗ್ರಂಥಾಲಯದ ಮುಖ್ಯಸ್ಥೆ ಜಯಶ್ರೀ, ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಕಸಾಪ ಉಡುಪಿ ತಾಲೂಕು ಸಮಿತಿಯ ಪ್ರಚಾರ ಸಮಿತಿಯ ಕಿರಣ್ ಮಂಜನ ಬೈಲು, ಆಸ್ಟ್ರೋ ಮೋಹನ್, ​ಜಾಲತಾಣ ಸಂಚಾಲಕ  ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಕಥೆ ಕೇಳೋಣ ಸರಣಿ ಸಂಚಾಲಕ ಸತೀಶ್ ಕೊಡವೂರು, ನಾಗರಾಜ್ ಹೆಬ್ಬಾರ್, ವಸಂತ್, ಪ್ರೊ. ಶಂಕರ್, ರಾಮಾಂಜಿ ನಮ್ಮ ಭೂಮಿ, ಶ್ರೀನಿವಾಸ ಉಪಾಧ್ಯ, ದೀಪ ಕರ್ಕಿ , ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು         

ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಅಭಿಯಾನದ ಸಂಚಾಲಕ ರಾಘ ವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Publisher: eSamudaay

Powered by