ಸಾಲಿಹಾತ್ ನೂತನ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮತ್ತು "ಉಜ್ವಲ ಭವಿಷ್ಯದೆಡೆಗೆ" ಸಾಮುದಾಯಿಕ ಸಮಾವೇಶ

28 Nov, 2024

ಉಡುಪಿ : ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಭಾಗವಾಗಿರುವ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಮತ್ತು "ಉಜ್ವಲ ಭವಿಷ್ಯದೆಡೆಗೆ" ಎಂಬ ಸಾಮುದಾಯಿಕ ಸಮಾವೇಶ ನವೆಂಬರ್ 30, ಶನಿವಾರ ಸಂಜೆ 6 ಗಂಟೆಗೆ ಸಾಲಿಹಾತ್ ಮೈದಾನ ಹೂಡೆ ಇಲ್ಲಿ ಆಯೋಜಿಸಲಾಗಿದೆ.

ಕಾಲೇಜು ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ನಂತರ ವೈವಿದ್ಯಮಯ, ಸೌಹಾರ್ದಯುತ , ಶಾಂತಿ ಮತ್ತು ಪ್ರಗತಿಯ ಭಾರತಕ್ಕಾಗಿ ವಿಶ್ವಾಸ, ಪರಸ್ಪರ ನಂಬಿಕೆಯ ಹಾಗೂ ಮೌಲ್ಯಗಳಿಂದ ಸಂಪನ್ನ ವಿಶಾಲ ದೃಷ್ಟಿಕೋನದ ಬೆಳೆಸುವ ಮೂಲಕ ಸಾಮಾಜಿಕ ಪರಿವರ್ತನೆಯತ್ತ ಸಾಗುವ ಉದ್ದೇಶದಿಂದ ಬೃಹತ್ ಸಾಮುದಾಯಿಕ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಅವಳಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುಟುಂಬ ಸಮೇತ ಭಾಗವಹಿಸಬೇಕೆಂದು ಆಮಂತ್ರಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ಭಾಗವಹಿಸುವಿಕೆಯನ್ನೂ ಬಯಸಲಾಗಿದೆ.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷರಾದ ಜನಾಬ್ ಸೈಯದ್ ಸದಾತುಲ್ಲಾ ಹುಸೈನಿ ಹಾಗೆಯೇ ಜಮಾಅತೆ ಇಸ್ಲಾಮಿ ಹಿಂದ್'ನ ಅಖಿಲ ಭಾರತ ಉಪಾಧ್ಯಕ್ಷರಾದ ಜನಾಬ್ ಮಲಿಕ್ ಮೊಹ್'ತಸೀಮ್ ಖಾನ್, ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷರಾದ ಸಹೋದರ ರಮೀಝ್ ಇ.ಕೆ, ಜಮಾಅತೆ ಇಸ್ಲಾಮಿ ಹಿಂದ್'ನ ರಾಜ್ಯ ಅಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್, ಎಸ್.ಐ.ಓ ರಾಜ್ಯ ಅಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ, ಶಾಂತಿ ಪ್ರಕಾಶನದ ನಿರ್ದೇಶಕರಾದ ಜನಾಬ್ ಮುಹಮ್ಮದ್ ಕುಂಞ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಇಸ್ಮಾಯಿಲ್ ಸಾಹೇಬ್ ಉಪಸ್ಥಿತರಿರುವರು.

ನೂತನ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಉದ್ಘಾಟನೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷರಾದ ಜನಾಬ್ ಸೈಯದ್ ಸಾದತುಲ್ಲಾ ಹುಸೈನಿಯವರು ನೆರೆವೇರಿಸಲಿರುವರು.

 

Publisher: eSamudaay

Powered by