ಉಡುಪಿ: ಉಡುಪಿ ಲೋಂಬಾರ್ಡ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ) ಮತ್ತು ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ಡಿ.1 ರಂದು ಮ್ಯಾರಥಾನ್ ಮಲ್ಪೆಯ ಸಿವಾಕ್‌ನಲ್ಲಿ ಆಯೋಜಿಸಲಾಗಿದೆ. ಓಟವು 21ಕಿ.ಮೀ, 10 ಕಿ.ಮೀ 5 ಕಿ.ಮೀ ಮತ್ತು ಉಡುಪಿ ಶಾಲಾ ವಿದ್ಯಾರ್ಥಿಗಳಿಗಾಗಿ 3ಕಿ.ಮೀ., 5 ಕಿ.ಮೀ ಮತ್ತು 3 ಕಿ.ಮೀ ಮೋಜಿನ ಓಟವನ್ನು ಏರ್ಪಡಿಸಲಾಗಿದೆ.
ಸುಮಾರು 2000 ಕ್ರೀಡಾಪಟುಗಳು ಈ ಮ್ಯಾರಥಾನ್ ಓಟಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಇಂದು ಪ್ರೊಮೋ ರನ್‌ನ ಓಟಕ್ಕೆ ಚಾಲನೆ ನೀಡಲಾಯಿತು.
ಲಯನ್ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶೀಲ್ ಜತನ್ನ ಧ್ವಜ ಹಾರಿಸುವ ಮೂಲಕ ಓಟಕ್ಕೆ ಇಂದು ಚಾಲನೆ ನೀಡಿದರು. ಆಕರ್ಷಕ ಬ್ಯಾಂಡ್‌ನನ್ನು ಆಶಾ ನಿಲಯದ ಮಕ್ಕಳು ಭಾರಿಸಿದರು . ಕಾರ್ಯಕ್ರಮದಲ್ಲಿ ರನ್ನರ್ಸ್ ಕ್ಲಬ್ ನ ಅಧ್ಯಕ್ಷ ತಿಲಕ್ ಚಂದ್ರ ಹಾಗೂ ತಂಡದವರು ಭಾಗಸಿದರು. ಪ್ರಚಾರ ಓಟವು ಮಿಷನ್ ಆಸ್ಪತ್ರೆಯಿಂದ ಪ್ರಾರಂಭವಾಗಿ ಕ್ಲಾಕ್ ಟವರ್ ಸುತ್ತಿ ಆಸ್ಪತ್ರೆಯ ವಠಾರದಲ್ಲಿ ಧ್ವಜ ಇಳಿಸುವುದರ ಮೂಲಕ ಸಮಾಪನಗೊಂಡಿತು.
ಡಿ.1 ರ ಓಟದ ಸ್ಪರ್ಧೆಯು ವಿವಿಧ ವಯೋಮಾನದಲ್ಲಿ ದ್ದು ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಲೋಂಬಾರ್ಡ ಹಾಸ್ಪಿಟಲ್‌ನಲ್ಲಿ ಪ್ರಾರಂಭವಾಗಿ 100 ವರ್ಷಗಳು ನೆನಪಿಗಾಗಿ ಉಡುಪಿ ರನ್ನರ್ಸ್ ಕ್ಲಬ್ ಮತ್ತು ಲೋಂಬಾರ್ಡ ಹಾಸ್ಪಿಟಲ್ ಪ್ರಾಯೋಜಕತ್ವ ದಲ್ಲಿ ಓಟವನ್ನು ಇದೇ ಬರುವ ಡಿಸೆಂಬರ 1ಕ್ಕೆ ಆಯೋಜಿಸಲಾಗಿದೆ.
Publisher: eSamudaay