ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರಕ್ಕೆ ಆಯ್ಕೆ

06 Nov, 2024

 

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದ ಅಧ್ಯಯನ ಕೇಂದ್ರದಿಂದ ವಾರ್ಷಿಕವಾಗಿ ಕೊಡಮಾಡುವ ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರಕ್ಕೆ ನಾಲ್ಕು ವರ್ಷಗಳ ಅವಧಿಗೆ ಪರಿಣಿತರ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

2021-22 ನೇ ಸಾಲಿನ ಕನಕಗೌರವ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರೊ. ತಾಳ್ತಜೆ ವಸಂತಕುಮಾರ್, 2022-23 ನೇ ಸಾಲಿಗೆ ಹಾವೇರಿಯ ಡಾ.ನೀಲಪ್ಪ ಮೈಲಾರಪ್ಪ ಅಂಬಲಿಯವರ, 2023-24 ನೇ ಸಾಲಿಗೆ ಬೆಂಗಳೂರಿನ ಡಾ.ಎಚ್.ಎನ್. ಮುರಳೀಧರ, 2024-25 ನೇ ಸಾಲಿಗೆ ತುಮಕೂರಿನ ಡಾ. ಜಿ.ವಿ. ಆನಂದಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

 2021-22 ನೇ ಸಾಲಿನ ಕನಕ ಯುವ ಪುರಸ್ಕಾರಕ್ಕೆ ಮೈಸೂರಿನ ಡಾ.ಅನಿಲ್‍ಕುಮಾರ್,  2022-23 ನೇ ಸಾಲಿಗೆ ಚಿಕ್ಕಮಗಳೂರಿನ ಡಾ.ಚಿಕ್ಕಮಗಳೂರು ಗಣೇಶ್, 2023-24 ನೇ ಸಾಲಿಗೆ ವಿಜಯನಗರ ಜಿಲ್ಲೆಯ ಡಾ.ಉಮೇಶ .ಎಂ (ಉಬಾಮ), 2024-25 ನೇ ಸಾಲಿಗೆ ಅರ್ಹ ಯುವ ಪುರಸ್ಕøತರು ಅಲಭ್ಯವಾಗಿರುವುದರಿಂದ ಆಯ್ಕೆ ಮಾಡಿರುವುದಿಲ್ಲ.

ಕನಕ ಗೌರವ ಪುರಸ್ಕಾರವನ್ನು 50 ವರ್ಷಕ್ಕೂ ಮೇಲ್ಪಟ್ಟ ಹಿರಿಯ ವಿದ್ವಾಂಸರಿಗೆ ಕನಕ ಗೌರವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪುರಸ್ಕಾರದ ಮೊತ್ತ ರೂ.75,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ. ಈಗಾಗಲೇ ಕನಕದಾಸರ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರಕಟಣೆಗಳನ್ನು ಹೊರತಂದಿರುವ ಹಿರಿಯ ವಿದ್ವಾಂಸರನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.

ಕನಕ ಯುವ ಪುರಸ್ಕಾರವನ್ನು 40 ವರ್ಷದೊಳಗಿನ ಕಿರಿಯ ವಿದ್ವಾಂಸರಿಗೆ ಕನಕ ಯುವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯ ಮೊತ್ತ ರೂ.50,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ. ಕನಕದಾಸರ ಬಗ್ಗೆ ಅಧ್ಯಯನ ಪೂರ್ಣ ಅಭ್ಯಾಸ ಮಾಡುತ್ತಿರುವ ಪ್ರಕಟಣೆಗಳನ್ನು ಹೊರತರುತ್ತಿರುವ, ಕನಕದಾಸರ ಸಾಹಿತ್ಯ - ಸಂದೇಶಗಳನ್ನು ಪ್ರಚಾರ ಮಾಡುತ್ತಿರುವ ಯುವ ವಿದ್ವಾಂಸರನ್ನು ‘ಕನಕ ಯುವ ಪುರಸ್ಕಾರ'ಕ್ಕೆ ಪರಿಗಣಿಸಲಾಗುತ್ತದೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: eSamudaay

Powered by